ETV Bharat / state

ಚಾಮರಾಜನಗರದಲ್ಲಿ 25 ಸಾವಿರ ದಾಟಿದ ಕೊರೊನಾ ಪರೀಕ್ಷೆ: 900ಕ್ಕೆ ಏರಿದ ಸೋಂಕಿತರು - ಚಾಮರಾಜನಗರ ಕೊರೊನಾ ವೈರಸ್

ಇಲ್ಲಿಯವರೆಗೆ 25128 ಮಂದಿಯನ್ನು ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 568 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಚಾಮರಾಜನಗರ
ಚಾಮರಾಜನಗರ
author img

By

Published : Aug 5, 2020, 7:34 PM IST

Updated : Aug 5, 2020, 7:42 PM IST

ಚಾಮರಾಜನಗರ: ಜಿಲ್ಲೆಯಲ್ಲಿ ಈವರೆಗಿನ ಕೊರೊನಾ ಪರೀಕ್ಷೆ 25 ಸಾವಿರ ದಾಟಿದ್ದು, ಸೋಂಕಿತರ ಸಂಖ್ಯೆ 900 ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 21 ಮಂದಿ ಬಿಡುಗಡೆಯಾಗಿದ್ದಾರೆ.

ಇಲ್ಲಿಯವರೆಗೆ 25128 ಮಂದಿಯನ್ನು ಜಿಲ್ಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 568 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದು ಕೊಳ್ಳೇಗಾಲದ 72 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗುವ ಮೂಲಕ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಚಾಮರಾಜನಗರ
ಚಾಮರಾಜನಗರದ ವರದಿ
ಗುಂಡ್ಲುಪೇಟೆ ,ಕೊಳ್ಳೇಗಾಲ ಬಳಿಕ ಚಾಮರಾಜನಗರದಲ್ಲಿಂದು ಸೋಂಕು‌ 200ರ ಗಡಿ ದಾಟಿದ್ದು, ಯಳಂದೂರು ಶತಕದ ಅಂಚಿನಲ್ಲಿದೆ‌. ಚಾಮರಾಜನಗರ ತಾಲೂಕಿನ‌ಲ್ಲಿ 214, ಗುಂಡ್ಲುಪೇಟೆ 262, ಕೊಳ್ಳೇಗಾಲ 259, ಯಳಂದೂರು 97, ಹನೂರು ತಾಲೂಕಿನಲ್ಲಿ 52 ಹಾಗೂ ಬೇರೆ ಜಿಲ್ಲೆಯ 16 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಇಂದಿನ ಸೋಂಕಿತರಲ್ಲಿ 2 ವರ್ಷದ ಒಂದು ಮಗು, 7 ವರ್ಷದ ಇಬ್ಬರು ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಚಾಮರಾಜನಗರ ತಾಲೂಕಿನ 4 ತಿಂಗಳ ಮಗುವೊಂದು ಮಹಾಮಾರಿ ವಿರುದ್ಧ ಜಯಸಾಧಿಸಿದೆ.

Last Updated : Aug 5, 2020, 7:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.