ETV Bharat / state

ಗಂಟಲು ದ್ರವ ತೆಗೆಯುತ್ತಿದ್ದ ಸಿಬ್ಬಂದಿಗೆ ಕೊರೊನಾ: ಯಳಂದೂರು ಆಸ್ಪತ್ರೆ ಸೀಲ್​ ಡೌನ್​ - ಯಳಂದೂರು ತಾಲೂಕು ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಸೋಂಕು

ಚಾಮರಾಜನಗರದ ಯಳಂದೂರು ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರ ಗಂಟಲು ದ್ರವ ಸಂಗ್ರಹಿಸುತ್ತಿದ್ದ ಪುರುಷ ವೈದ್ಯಕೀಯ ಸಿಬ್ಬಂದಿ ಕಳೆದ 3 ದಿನದ ಹಿಂದೆ ಜ್ವರ ಬಂದಿದ್ದರಿಂದ ರಜೆ ಹಾಕಿದ್ದರು. ಇದೀಗ ಅವರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ.

corona for swab collector in Yalanduru
ಯಳಂದೂರು ಆಸ್ಪತ್ರೆ ಸೀಲ್ ಡೌನ್
author img

By

Published : Jul 9, 2020, 2:57 PM IST

ಚಾಮರಾಜನಗರ: ಗಂಟಲು ದ್ರವ ತೆಗೆಯುತ್ತಿದ್ದ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಯಳಂದೂರು ಸರ್ಕಾರಿ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಗಂಟಲು ದ್ರವ ಸಂಗ್ರಹಿಸುತ್ತಿದ್ದ ಪುರುಷ ವೈದ್ಯಕೀಯ ಸಿಬ್ಬಂದಿ 3 ದಿನದ ಹಿಂದೆ ಜ್ವರ ಬಂದಿದ್ದರಿಂದ ರಜೆ ಹಾಕಿದ್ದರು. ಇದೀಗ ಅವರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಹೀಗಾಗಿ ಆಸ್ಪತ್ರೆಗೆ ಸೋಂಕು ನಿಯಂತ್ರಕ ದ್ರಾವಣ ಸಿಂಪಡಿಸಿ, ಸೀಲ್ ಡೌನ್​ ಮಾಡಲಾಗಿದೆ. ಅಲ್ಲದೆ ಈತನೊಂದಿಗೆ ಸಂಪರ್ಕ ಹೊಂದಿದ್ದ 75ಕ್ಕೂ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಯ ಕೊರೊನಾ ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಯಳಂದೂರು ಆಸ್ಪತ್ರೆ ಸೀಲ್ ಡೌನ್

ಇದರ ಜೊತೆಗೆ ಈ ಹಿಂದೆ ಸೋಂಕು ದೃಢಪಟ್ಟಿದ್ದ ಯಳಂದೂರಿನ ಸಾಮಾಜಿಕ ಕಾರ್ಯಕರ್ತನ ಪತ್ನಿ ಮತ್ತು ಮಗುವಿಗೂ ಸೋಂಕು ತಗುಲಿದೆ. ಜೊತೆಗೆ ಬೆಂಗಳೂರಿನಿಂದ ಬಂದಿದ್ದ ದಂಪತಿಗೂ ಪಾಸಿಟಿವ್ ಬಂದಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.