ಚಾಮರಾಜನಗರ: "ಬಿಜೆಪಿಗೆ ನಿಜಕ್ಕೂ ಗೆಲ್ಲುವ ಧೈರ್ಯ ಇದ್ದಿದ್ದರೇ ಮೋದಿ ಮತ್ತು ಅಮಿತ್ ಶಾ ಯಾಕೆ ಇಷ್ಟು ಬಾರಿ ರಾಜ್ಯಕ್ಕೆ ಬರುತ್ತಿದ್ದಾರೆ?" ಎಂದು ಕಾಂಗ್ರೆಸ್ ಶಾಸಕ ಸಿ ಪುಟ್ಟರಂಗ ಶೆಟ್ಟಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಚಾಮರಾಜನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಮೋದಿ, ಅಮಿತಾ ಶಾ ರಾಜ್ಯಕ್ಕೆ ಇಷ್ಟು ಬಾರಿ ಬರ್ತಾ ಇದ್ದಾರಲ್ಲ. ಅದೇ ರಾಜ್ಯ ಮಳೆಯಿಂದ ಮುಳುಗಿದಾಗ ಅವರು ಯಾಕೆ ಬರಲಿಲ್ಲ? ಕೊರೊನಾ ಅವಾಂತರದಲ್ಲಿ ಏಕೆ ಬರಲಿಲ್ಲ? ವಿಶೇಷ ಅನುದಾನ ಏಕೆ ಕೊಡಲಿಲ್ಲ? ಬಿಜೆಪಿಗೆ ಗೆಲ್ಲುವ ಧೈರ್ಯ ಇದ್ದಿದ್ದರೇ ಮೋದಿ ದೆಹಲಿಯಲ್ಲಿಯೇ ಕುಳಿತು ಕೈ ಅಲ್ಲಾಡಿಸಬೇಕಿತ್ತು" ಎಂದು ವ್ಯಂಗ್ಯವಾಡಿದರು.
"ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ವಿದಾಯ ಬಿಜೆಪಿಗೆ ಹಿನ್ನಡೆಯಾಗಲಿದೆ. ರಥಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ, ಜನರು ಅವರನ್ನು ಬೈದು ಕಳುಹಿಸುತ್ತಾರೆ. ಬಿಜೆಪಿ ಕೊಡುಗೆ ರಾಜ್ಯಕ್ಕೆ ಏನೇನು ಇಲ್ಲಾ. ಬಿಜೆಪಿಯೇ ಭರವಸೆ ಎಂದು ಗೋಡೆಗಳಲ್ಲಿ ಬರೆದುಕೊಂಡಿದ್ದಾರಷ್ಟೇ. 100 ಕ್ಕೆ 100 ರಷ್ಟು ಸುಳ್ಳು ಹೇಳುವ ಸರ್ಕಾರ ಇದ್ದರೇ ಅದು ಬಿಜೆಪಿ ಮಾತ್ರ, ಒಂದಾದರೂ ಸತ್ಯ ಹೇಳಲಿ ನೋಡೋಣ. ಸಿದ್ದರಾಮಯ್ಯ ಅವಧಿಯಲ್ಲಷ್ಟೇ ಚಾಮರಾಜನಗರ ಅಭಿವೃದ್ಧಿಯಾಗಿದ್ದು, ಬಿಜೆಪಿ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ" ಎಂದು ಕಿಡಿಕಾರಿದರು. "ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯ ಆರಂಭಿಸಿದ್ದ ಯೋಜನೆಗಳಿಗೆ ಮುಂದುವರಿಕೆ ಭಾಗವಾಗಿ ಹಣ ಕೊಟ್ಟಿದ್ದಾರೆಯೇ ಹೊರತು ಹೊಸ ಅನುದಾನ ಯಾವುದು ಬಂದಿಲ್ಲ. ಅನುದಾನ ಕೊಡುವುದಾಗಿ ಚಾಮರಾಜನಗರದಲ್ಲಿ ಹೇಳಿದ ಸಿಎಂ ಬೆಂಗಳೂರಿಗೆ ಹೋಗಿ ರಿಜೆಕ್ಟ್ ಮಾಡಿದ್ದಾರೆ" ಎಂದು ಆರೋಪಿಸಿದರು.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ನರೇಂದ್ರ ಮೋದಿ.. ಯಡಿಯೂರಪ್ಪ ಗುಣಗಾನ ಮಾಡಿದ ಪ್ರಧಾನಿ
ಇದನ್ನೂ ಓದಿ: ಸರ್ವಸದಸ್ಯರ ಅಧಿವೇಶನದ ಸಮಾರೋಪ ಸಮಾರಂಭ: ಹೊಸ ಕಾಂಗ್ರೆಸ್ ಆರಂಭವಾಗಿದೆ ಎಂದ ಮಲ್ಲಿಕಾರ್ಜುನ ಖರ್ಗೆ