ETV Bharat / state

ಅಂದು ಮಹಾದೇವಪ್ರಸಾದ್ ಇಂದು ಧ್ರುವನಾರಾಯಣ್​: ಬಲಿಷ್ಠ ನಾಯಕರನ್ನು ಕಳೆದುಕೊಂಡ ಕಾಂಗ್ರೆಸ್​ - ಈಟಿವಿ ಭಾರತ ಕನ್ನಡ

ಕಾಂಗ್ರೆಸ್​ ಪಕ್ಷ ಎರಡು ಬಲಿಷ್ಠ ನಾಯಕರನ್ನು ಕಳೆದುಕೊಂಡಿದೆ. ಎಚ್ ಎಸ್ ಮಹಾದೇವಪ್ರಸಾದ್ ನಿಧನರಾದ ಬಳಿಕ ಕೈ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದ ಆರ್​​ ಧ್ರುವನಾರಾಯಣ್ ಕೂಡ ಇಂದು ನಿಧನರಾಗಿದ್ದಾರೆ.

congress
ಅಂದು ಮಹಾದೇವಪ್ರಸಾದ್ ಇಂದು ಧ್ರುವನಾರಾಯಣ್​
author img

By

Published : Mar 11, 2023, 3:40 PM IST

ಚಾಮರಾಜನಗರ: ಮುಂಬರುವ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಆರ್​​ ಧ್ರುವನಾರಾಯಣ್​ ಅಗಲಿಕೆ ದೊಡ್ಡ ಆಘಾತವನ್ನೇ ನೀಡಿದೆ. ಹಳೇ ಮೈಸೂರು ಭಾಗದಲ್ಲಿ ಶ್ರೀನಿವಾಸ ಪ್ರಸಾದ್ ನಂತರ ದಲಿತ ನಾಯಕ ಎನಿಸಿಕೊಂಡಿದ್ದ ಧ್ರುವನಾರಾಯಣ ಅವರ ನಿಧನ ಪಕ್ಷ ಹಾಗೂ ಸಮಾಜಕ್ಕೆ ದೊಡ್ಡ ನಿರ್ವಾತವನ್ನು ಉಂಟು ಮಾಡಿದೆ.

2008 ರಲ್ಲಿ ಎಚ್ ಎಸ್ ಮಹಾದೇವಪ್ರಸಾದ್ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಬಳಿಕ ಮಹಾದೇವಪ್ರಸಾದ್ ಹಾಗೂ ಆರ್​ ಧ್ರುವನಾರಾಯಣ ಇಬ್ಬರು ಜೋಡೆತ್ತುಗಳಂತೆ ಪಕ್ಷ ಸಂಘಟಿಸಿ ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ಕ್ಕೆ 8 ಸ್ಥಾನಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು.‌ ಒಬ್ಬರು ಲಿಂಗಾಯತ ಸಮಾಜದ ನಾಯಕರಾದರೆ ಧ್ರುವನಾರಾಯಣ ದಲಿತ ನಾಯಕರಾಗಿ ಉತ್ತುಂಗಕ್ಕೇರುತ್ತಿದ್ದರು. ಮಹಾದೇವಪ್ರಸಾದ್ ಹಾಗೂ ಧ್ರುವನಾರಾಯಣ್​ ಅಭಿವೃದ್ಧಿ ದೃಷ್ಟಿಯಲ್ಲಿ ಇಬ್ಬರು ಸಮಾನ ಮನಸ್ಕರರಾಗಿದ್ದರು.

ಇದನ್ನೂ ಓದಿ: ಮಾಜಿ ಸಂಸದ ಆರ್​ ಧ್ರುವನಾರಾಯಣ್​ ಇನ್ನಿಲ್ಲ: ಗಣ್ಯರಿಂದ ಸಂತಾಪ

ಜೊತೆಗೆ ಜನರ ನಡುವೇ ಇರುವ ನಾಯಕರಾಗಿ ಸದಾ ಒಂದಲ್ಲಾ ಒಂದು ಯೋಜನೆ ರೂಪಿಸಿ ಅಭಿವೃದ್ಧಿ ಬಗ್ಗೆ ಹಾತೊರೆಯುತ್ತಿದ್ದ ನಾಯಕರುಗಳಾಗಿದ್ದರು. ಸಿದ್ದು ಸರ್ಕಾರದ ಕೊನೆಯ ಅವಧಿಯಲ್ಲಿ ಎಚ್ ಎಸ್ ಮಹಾದೇವಪ್ರಸಾದ್ ನಿಧನರಾದ ಬಳಿಕ ಬಡವಾದ ಕಾಂಗ್ರೆಸ್ ಗೆ ಶಕ್ತಿ ತುಂಬುತ್ತಿದ್ದ ಧ್ರುವನಾರಾಯಣ ಅವರು ಕೂಡ ನಿಧನರಾಗಿರುವುದು ಕಾಂಗ್ರೆಸ್ ಗೆ ನಿಜಕ್ಕೂ ತುಂಬಲಾರದ ದೊಡ್ಡ ನಷ್ಟ. ಅಲ್ಲದೇ ಹಳೇ ಮೈಸೂರು ಭಾಗ ವಿಶೇಷವಾಗಿ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೂ ದೊಡ್ಡ ಹೊಡೆತವನ್ನೇ ಈ ಇಬ್ಬರು ನಾಯಕರ ಅಗಲಿಕೆ ಕೊಟ್ಟಿದೆ.

ರಾಜ್ಯ ರಾಜಕೀಯದಲ್ಲಿ ಮೌನ: ಚಾಮರಾಜನಗರ ಜಿಲ್ಲೆಯ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​​ ಧ್ರುವನಾರಾಯಣ್​ ಅವರು ಇಂದು ನಿಧನರಾಗಿದ್ದಾರೆ. ಮೈಸೂರಿನ ವಿಜಯನಗರದಲ್ಲಿ ವಾಸವಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸರಳ ಹಾಗೂ ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಧ್ರುವನಾರಾಯಣ್​, ಎರಡು ಬಾರಿ ಚಾಮರಾಜನಗರ ಜಿಲ್ಲೆಯ ಸಂಸದರಾಗಿ ಮತ್ತು ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ಅಗಲಿಕೆಯಿಂದ ರಾಜ್ಯ ರಾಜಕೀಯದಲ್ಲಿ ಮೌನ ಆವರಿಸಿದೆ.

ಕಂಬನಿ ಮಿಡಿದ ರಾಜಕಾರಣಿಗಳು, ಅಭಿಮಾನಿಗಳು: ಧ್ರುವನಾರಾಯಣ್​ ಸಾವಿನ ಸುದ್ದಿ ತಿಳಿದು ಅನೇಕ ಕಾಂಗ್ರೆಸ್​ ನಾಯಕರು, ಇತರ ಪಕ್ಷದ ನಾಯಕರು, ಗಣ್ಯರು ಸೇರಿದಂತೆ ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕಾಂಗ್ರೆಸ್​ ಪಕ್ಷದ ನಾಯಕ ರಾಹುಲ್​ ಗಾಂಧಿ, ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೊಡಗು -ಮೈಸೂರು ಸಂಸದ ಪ್ರತಾಪ್​ ಸಿಂಹ, ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಅನೇಕರು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆ ರದ್ದು: ಧ್ರುವನಾರಾಯಣ್​ ನಿಧನದ ಹಿನ್ನೆಲೆ ದಾವಣಗೆರೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿದ್ದ ಪ್ರಜಾಧ್ವನಿ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಇತ್ತ ರಾಮನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರಜಾಧ್ವನಿ ಯಾತ್ರೆಯನ್ನು ಕೂಡ ಮುಂದೂಡಲಾಗಿದೆ.

ಇದನ್ನೂ ಓದಿ: ಒಂದು ಮತದ ಮೌಲ್ಯ ತೋರಿಸಿದ್ದ ಧ್ರುವನಾರಾಯಣ್.. ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿ ಕಣ್ಮರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.