ಚಾಮರಾಜನಗರ : ಕಾಲೇಜುಗಳ ಪ್ರವೇಶದ ಹಿನ್ನೆಲೆ ಜಿಲ್ಲೆಯ ಪದವಿ ತಾಂತ್ರಿಕ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಹಾಗೂ ಬೆಂಬಲ ಸಿಬ್ಬಂದಿಗೆ ಆಯಾ ಕಾಲೇಜುಗಳಲ್ಲಿಯೇ ಕೋವಿಡ್-19 ಲಸಿಕೆ ನೀಡಲು ಜೂನ್ 29 ರಂದು ಮೆಗಾ ಲಸಿಕಾ ಮೇಳವನ್ನು ಆರೋಗ್ಯ ಇಲಾಖೆ ಆಯೋಜಿಸಿದೆ.
ಜಿಲ್ಲೆಯ ಒಟ್ಟು 29 ಪದವಿ ಕಾಲೇಜು, ಡಾ. ಬಿ ಆರ್ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ಐಟಿಐ, ಪಾಲಿಟೆಕ್ನಿಕ್, ತಾಂತ್ರಿಕ ಇತರೆ ಕಾಲೇಜುಗಳಲ್ಲಿ ಲಸಿಕೆ ನೀಡಲಿದೆ. ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ಹಾಗೂ ಬೆಂಬಲ ಸಿಬ್ಬಂದಿ ಸೇರಿದಂತೆ ಒಟ್ಟು 8,352 ಮಂದಿಗೆ ಲಸಿಕೆ ನೀಡುವ ಗುರಿ ಆರೋಗ್ಯ ಇಲಾಖೆಯದ್ದಾಗಿದೆ.
ಲಸಿಕೆ ನೀಡುವ ಸಲುವಾಗಿ ಆರೋಗ್ಯ ಇಲಾಖೆ ಕಾಲೇಜುಗಳಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದು, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.