ETV Bharat / state

ಚಾಮರಾಜನಗರಕ್ಕೆ ಬರದ ಬಿಎಸ್​ವೈ ವಿರುದ್ಧ ಗೋ ಬ್ಯಾಕ್ ಸಿಎಂ ಅಭಿಯಾನ! - ಸಿದ್ದರಾಮಯ್ಯ

ಇಂದಿನಿಂದ ನ.26ರವರೆಗೆ ಸಿಎಂ ಯಡಿಯೂರಪ್ಪ ಅವರು ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ‌ಆದ್ರೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇನೆ ಎನ್ನುವ ಮೌಢ್ಯಕ್ಕೆ ಅವರು ಕಟ್ಟುಬಿದ್ದಿದ್ದಾರೆ ಎನ್ನಲಾಗ್ತಿದೆ. ಅಧಿಕಾರ ಕಳೆದುಕೊಳ್ಳುವ ಆತಂಕದ ಹಿನ್ನೆಲೆ ಕೇವಲ ಮಲೆಮಹದೇಶ್ವರ ಬೆಟ್ಟಕ್ಕೆ ಮಾತ್ರ ಭೇಟಿ ಕೊಡಲಿರುವ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

cm-bys-starts-3-days-visit-to-chmarajnagar-mysuru-from-today
ಸಿಎಂ ಬಿಎಸ್ ಯಡಿಯೂರಪ್ಪ
author img

By

Published : Nov 24, 2020, 10:11 AM IST

ಚಾಮರಾಜನಗರ: ಜಿಲ್ಲಾ ಕೇಂದ್ರಕ್ಕೆ ಬಂದರೇ ಸಿಎಂ ಅಧಿಕಾರ ಕಳೆದುಕೊಳ್ಳಲಿದ್ದಾರೆಂಬ ಮೌಢ್ಯಕ್ಕೆ ಕಟ್ಟುಬಿದ್ದು ಮಲೆಮಹದೇಶ್ವರ ಬೆಟ್ಟಕ್ಕೆ ಬಂದರೂ ನಗರಕ್ಕೆ ಬಾರದ ಸಿಎಂ ಯಡಿಯೂರಪ್ಪ ವಿರುದ್ಧ ಜಿಲ್ಲೆಯ ಜನತೆ ಆಕ್ರೋಶ ಹೊರಹಾಕಿದ್ದಾರೆ.

post in social media
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್​ಗಳು

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಹತ್ತಾರು ಬಾರಿ ನಗರಕ್ಕೆ ಭೇಟಿ ನೀಡಿ ನೂರಾರು ಕೋಟಿ ರೂ. ಅನುದಾನ ನೀಡಿದ್ದರು. ಜೊತೆಗೆ 5 ವರ್ಷಗಳ ಕಾಲ ಆಡಳಿತ ನಡೆಸಿ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೌಢ್ಯವನ್ನು ಅಳಿಸಿದ್ದರು‌‌. ಆದರೆ ಯಡಿಯೂರಪ್ಪ ಮಾತ್ರ ಅಧಿಕಾರ ವಹಿಸಿಕೊಂಡು 15 ತಿಂಗಳಾದರೂ ನಗರಕ್ಕೆ ಬರಲು ಮನಸ್ಸು ಮಾಡುತ್ತಿಲ್ಲ. ಎರಡು ದಿನ ಜಿಲ್ಲಾ ಪ್ರವಾಸ ಕೈಗೊಂಡರೂ ಚಾಮರಾಜನಗರಕ್ಕೆ ಆಗಮಿಸದಿರುವುದು ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ.

ಗೋಬ್ಯಾಕ್ ಅಭಿಯಾನ

ಚಾಮರಾಜನಗರಕ್ಕೆ ಬರಲು ಹಿಂದೇಟು ಹಾಕುತ್ತಿರುವ ಸಿಎಂ ಯಡಿಯೂರಪ್ಪ ವಿರುದ್ಧ ಕೆಲ ನೆಟ್ಟಿಗರು ಗೋಬ್ಯಾಕ್ ಸಿಎಂ ಅಭಿಯಾನ ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರಕ್ಕೆ ಬರದೇ ಮೌಢ್ಯಕ್ಕೆ ಜೋತುಬಿದ್ದು ಜಿಲ್ಲೆಯ ಜನರಿಗೆ ಅವಮಾನಿಸಬೇಡಿ. ಜಿಲ್ಲೆಗೆ ಬರಬೇಕೆಂದರೇ ಪುಣ್ಯ ಮಾಡಿರಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ನ. 24ರಿಂದ 3 ದಿನ ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸ.. ಮುಖ್ಯಮಂತ್ರಿಗೆ ಮೌಢ್ಯ ಭೀತಿ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.