ಚಾಮರಾಜನಗರ: ಸಿರಂಜ್ಗಳು, ಸ್ಯಾನಿಟೈಸರ್ ಬಾಟಲಿಗಳು, ಬಾಡಿ ಸ್ಪ್ರೇ ಬಾಟಲಿಗಳಲ್ಲಿ ಚಾಕೋಲೆಟ್ ಮಾರಾಟಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ತಹಶೀಲ್ದಾರ್ ಹಾಗೂ ಡಿಹೆಚ್ಒ ಡಾ. ಗೋಪಾಲ್ ನೇತೃತ್ವದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಮಾರಾಟ ಮಾಡುತ್ತಿದ್ದ 8ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸಿ ಚಾಕೋಲೆಟ್ ವಶಪಡಿಸಿಕೊಂಡು ಪರೀಕ್ಷೆಗಾಗಿ ಗುಂಡ್ಲುಪೇಟೆಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಜೊತೆಗೆ ಪರೀಕ್ಷೆಯ ವರದಿ ಬರುವ ತನಕ ಚಾಕೋಲೆಟ್ಗಳನ್ನು ಮಾರಾಟ ಮಾಡಬಾರದು ಎಂದು ತಾಕೀತು ಮಾಡಲಾಗಿದೆ.
ಓದಿ:ಬಾಡಿ ಸ್ಪ್ರೇ, ಸಿರಿಂಜ್ಗಳಲ್ಲಿ ಚಾಕೋಲೆಟ್... ಕೊಳ್ಳೇಗಾಲದಲ್ಲಿ ಆತಂಕಕಾರಿ ಬೆಳವಣಿಗೆ!
ಸಿರಿಂಜ್ಗಳಲ್ಲಿ ಚಾಕೋಲೆಟ್ ಮಾರಾಟ ಮಾಡುತ್ತಿದ್ದ ಸಂಬಂಧ ಈಟಿವಿ ಭಾರತ ವರದಿ ಬಿತ್ತರಿಸಿದ್ದರಿಂದ ಡಿಹೆಚ್ಒ ಗಮನಕ್ಕೆ ಬಂದಿತ್ತು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.