ಚಿಕ್ಕಮಗಳೂರು: ವೈಟ್ ಅಂಡ್ ವೈಟ್‍ನಲ್ಲಿ ಮಿರ-ಮಿರ ಮಿಂಚುತ್ತಿರೋ ಈತನ ಹೆಸರು ಯೋಗಾನಂದ್, ಗೋಲ್ಡನ್ ಕಲರ್ ಸ್ಯಾರಿ ಉಟ್ಟು ಕ್ಯೂಟಾಗಿ ಕಾಣ್ತಿರೋ ಈಕೆ ಹೆಸರು ಚಂದನಾ. ಇವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನವರು. ಈತ ಕಬ್ಳಿ ಗ್ರಾಮದವನು. ಅವ್ಳು ಜಿ.ಕೊಪ್ಪಲುನವಳು. ಇಬ್ಬರೂ ಕಡೂರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪದವಿ ಓದುತ್ತಿದ್ದರು. ಅಲ್ಲಿಂದ ಆರಂಭವಾದ ಪ್ರೀತಿ ಈ ಮಟ್ಟಕ್ಕೆ ತಲುಪಿದ್ದು. ಈಗ ರಕ್ಷಣೆ ಬೇಕೆಂದು ಮನವಿ ಮಾಡುತ್ತಿದ್ದಾರೆ.
ಯೋಗಾನಂದ್ ಸೀನಿಯರ್, ಚಂದನ ಜೂನಿಯರ್. ಇಬ್ಬರು ಕೂಡ ಗಾಢವಾಗಿ ಪ್ರೀತಿಸುತ್ತಿದ್ದರು. ಎರಡು ವರ್ಷದ ಹಿಂದೆ ಯೋಗಾನಂದ್ ಪದವಿ ಮುಗಿಸಿಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾನೆ. ಚಂದನಾ ಅದೇ ಕಾಲೇಜಿನಲ್ಲಿ ಫೈನಲ್ ಇಯರ್ ಬಿಕಾಂ ಓದುತ್ತಿದ್ದಾಳೆ. ದಿನಕಳೆದಂತೆ ಇಬ್ಬರ ನಡುವಿನ ಪ್ರೀತಿ ಮತ್ತಷ್ಟು ಗಟ್ಟಿಯಾಗಿತ್ತು.
ಹೇಗೋ ಈ ವಿಚಾರ ಹುಡುಗಿಯ ಮನೆಯವರಿಗೆ ಗೊತ್ತಾಗಿದೆ. ಚಂದನಾಗೆ ಕ್ಲಾಸ್ ತೆಗೆದುಕೊಂಡ ಮನೆಯವರು ಆಕೆಯನ್ನ ನಿಗೂಢ ಸ್ಥಳದಲ್ಲಿ ಇಟ್ಟಿದ್ದರಂತೆ. ಮಗಳನ್ನ ಬಚ್ಚಿಟ್ಟಿದ್ದ ಹೆತ್ತವರು ಬೇರೆ ಹುಡುಗನನ್ನ ಮದುವೆಗಾಗಿ ನೋಡಿದ್ದರಂತೆ. ಹಾಗಾಗಿ, ಆ ನಿಗೂಡ ಸ್ಥಳವನ್ನ ಪತ್ತೆಮಾಡಿದ ಪ್ರೇಮಿ, ತನ್ನ ಪ್ರಿಯತಮೆಯನ್ನ ಆ ಬಂಧನದಿಂದ ಬಿಡಿಸಿಕೊಂಡು ಬಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಮದುವೆಯ ಬಳಿಕ ರಕ್ಷಣೆ ಕೋರಿ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಬೆದರಿಕೆಯ ಮೇಲ್ : 20 ಕೆಜಿ ಆರ್‌ಡಿಎಕ್ಸ್ ರೆಡಿ ಮಾಡಿಟ್ಟುಕೊಳ್ಳಲಾಗಿದೆಯಂತೆ
ಇಬ್ಬರು ಓಡಿ ಹೋಗಿ ಮದುವೆಯಾಗಿರೋ ವಿಷಯ ಕೇಳಿ ಹುಡುಗಿ ಮನೆಯವರು ಇಬ್ಬರಿಗೂ ಹುಡುಕಾಡಿದ್ದಾರೆ. ಆದರೆ, ಅವರು ಸಿಕ್ಕಿಲ್ಲ. ಇದರ ನಡುವೆ ಯುವತಿ ಇಬ್ಬರು ಮಾವಂದಿರು ಕರೆ ಮಾಡಿ ಜೋಡಿಗೆ ಕೊಲೆ ಬೆದರಿಕೆ ಹಾಕಿದ್ದಾರಂತೆ. ಪರಿಣಾಮ ನಾವಿಬ್ಬರು ಪರಸ್ಪರ ಪ್ರೀತಿಸಿ, ಯಾವುದೇ ಒತ್ತಡವಿಲ್ಲದೇ ಇಷ್ಟಪಟ್ಟು ಮದ್ವೆಯಾಗಿದ್ದೇವೆ. ನಮಗೇನಾದರೂ ತೊಂದರೆಯಾದರೆ ನಮ್ಮ ಮಾವಂದಿರೇ ಕಾರಣ ಅಂತಾ ಚಂದನ ಆರೋಪಿಸಿದ್ದಾಳೆ.
ನಮಗೆ ಹೆತ್ತವರನ್ನ ಒಪ್ಪಿಸಿ ಮದುವೆಯಾಗಬೇಕು ಎಂಬ ಆಸೆ ಇತ್ತು. ನಮ್ಮ ಮನೆಯವರು ಒಪ್ಪಲಿಲ್ಲ. ಕೊಲೆ ಬೆದರಿಕೆ ಹಾಕಿದರು. ಅದಕ್ಕೆ ಓಡಿ ಬಂದು ಮದುವೆ ಆಗಿದ್ದೇವೆ. ನಮಗೆ ಬದುಕಲು ಬಿಟ್ಟರೆ ಸಾಕು ಅಂತಾ ನವವಧು ಮನವಿ ಮಾಡಿದ್ದಾಳೆ. ಸಖರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿರೋ ಜೋಡಿ, ಸೂಕ್ತ ರಕ್ಷಣೆ ಕೋರಿ ಎಸ್ಪಿಗೆ ಮನವಿ ಮಾಡಿದ್ದಾರೆ.