ETV Bharat / state

ಇಂದಿರಾ ಕ್ಯಾಂಟೀನ್ ಹೆಸರು ಬದಲು ಸರಿಯಲ್ಲ: ಶಾಸಕ ಸಾ.ರಾ.ಮಹೇಶ್ - valmiti anna kuteera

ಇಂದಿರಾ ಕ್ಯಾಂಟೀನ್ ಅನ್ನು ವಾಲ್ಮೀಕಿ ಅನ್ನ ಕುಟೀರವೆಂದು ಹೆಸರು ಬದಲಾವಣೆಗೆ ಮುಂದಾಗಿರುವುದು ಸರಿಯಲ್ಲ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.

MLA Sara mahesh, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ
ಶಾಸಕ ಸಾ.ರಾ.ಮಹೇಶ್
author img

By

Published : Dec 19, 2019, 6:16 AM IST

ಚಾಮರಾಜನಗರ: ಇಂದಿರಾ ಕ್ಯಾಂಟೀನ್ ಅನ್ನು ವಾಲ್ಮೀಕಿ ಅನ್ನ ಕುಟೀರವೆಂದು ಹೆಸರು ಬದಲಾವಣೆಗೆ ಮುಂದಾಗಿರುವುದು ಸರಿಯಲ್ಲ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.

ಜಿಪಂ ಸಭಾಂಗಣದಲ್ಲಿ ನಡೆದ ಕಾಗದ ಪತ್ರಗಳ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹಿರಿಯ ರಾಜಕಾರಣಿಗಳು ಈ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆವರ ಹೆಸರಿನಲ್ಲಿ ಜಾರಿ ಮಾಡಿರುವ ಯೋಜನೆಗಳ ಹೆಸರು ಬದಲಾಯಿಸುವುದು ಸರಿಯಲ್ಲ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಯೋಜನೆಗಳು ನಿರಂತರವಾಗಿ ಚಾಲನೆಯಲ್ಲಿರುತ್ತವೆ. ವಾಜಪೇಯಿ ಆರೋಗ್ಯ ಯೋಜನೆ, ದೀನ್‍ದಯಾಳ್ ಗ್ರಾಮೀಣ ವಿದ್ದುದ್ದೀಕರಣ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಜಾರಿಯಲ್ಲಿವೆ. ಅವುಗಳನ್ನು ಬೇರೆ ಸರ್ಕಾರಗಳು ಬಂದರೆ ಬದಲಾವಣೆ ಮಾಡಲಾಗುತ್ತದೆಯೇ ಎಂದರು.

ಉಪಚುನಾವಣೆಗಳು ಬರುತ್ತವೆ, ಹೋಗುತ್ತವೆ. ಇದೇನು ಕೂಡ ಜೆಡಿಎಸ್ ಮೇಲೆ ಪರಿಣಾಮ ಬೀರಿಲ್ಲ, ಜೆಡಿಎಸ್‍ನ ಯಾವೊಬ್ಬ ಶಾಸಕರೂ ಕೂಡ ಬಿಜೆಪಿ ಸೇರುವುದಿಲ್ಲ, ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಉಪಚುನಾವಣೆ ಮೂಲಕವೇ ರಾಜ್ಯ ರಾಜಕಾರಣಕ್ಕೆ ಬಂದರು ಎಂಬುದನ್ನು ಮರೆಯಬಾರದು. ಉಪಚುನಾವಣೆಯಲ್ಲಿ ತಟಸ್ಥರಾಗಿದ್ದ ಜಿಟಿಡಿಗೆ ಟಾಂಗ್ ನೀಡಿದರು.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಶಾಸಕ ಸಾ.ರಾ.ಮಹೇಶ್ ಪ್ರತಿಕ್ರಿಯೆ

ಕಡತ ವಿಲೇವಾರಿಯಾಗದಿದ್ದರೆ ಕ್ರಮ:

ಇದಕ್ಕೂ ಮುನ್ನ ಜಿಪಂ ಸಭಾಂಗಣದಲ್ಲಿ ನಡೆದ ಲೆಕ್ಕಪತ್ರ ಸಮಿತಿ ಸಭೆ ಕುರಿತು ಮಾತನಾಡಿದ ಅವರು, ಚಾಮರಾಜನಗರ ಜಿಪಂಗೆ ಸಂಬಂಧಪಟ್ಟಂತೆ 372 ಕಡತಗಳು ಬಾಕಿ ಇದ್ದು, ಇವುಗಳ ಬಗ್ಗೆ 100 ದಿನದಲ್ಲಿ ಕ್ರಮ ಕೈಗೊಳ್ಳದಿದ್ದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಮಿತಿಯು ತಿಂಗಳಲ್ಲಿ ಮೂರು ಸಭೆಗಳನ್ನು ವಿಧಾನಸಭೆಯಲ್ಲಿ ನಡೆಸಿ, ನಾಲ್ಕನೇ ಸಭೆಯನ್ನು ಜಿಲ್ಲೆಗಳಲ್ಲಿ ನಡೆಸಿ, ಬಾಕಿ ಇರುವ ಕಡತಗಳನ್ನು ಪರಿಶೀಲಿಸಿ,ಅಗತ್ಯ ಕ್ರಮಕ್ಕೆ ಸಂಬಂಧಪಟ್ಟವರಿಗೆ ಸಮಯ ನಿಗದಿ ಮಾಡಿ ಆನಂತರ ವಿಧಾನಮಂಡಲದಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.

ಚಾಮರಾಜನಗರ ಜಿಪಂನಲ್ಲಿ 372 ಕಡತಗಳು ಬಾಕಿ ಇದ್ದು, ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಜಿಲ್ಲಾಧಿಕಾರಿ, ಜಿ.ಪಂ. ಸಿಇಓ ಸೇರಿದಂತೆ ಎಲ್ಲಾ ಅಧಿಕಾರಿಗಳು ಕಡತಗಳ ವಿಲೇವಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಕಡತಗಳು ಬಾಕಿ ಇದ್ದು, ಇವುಗಳ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದರು.

ಸಮಿತಿಯ ಸದಸ್ಯ ಕೆ.ವಿ. ಅಶೋಕ್‍ ನಾಯ್ಕ್ ಮಾತನಾಡಿ, ಬಾಕಿ ಇರುವ ಕಡತಗಳ ಬಗ್ಗೆ 100 ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾಂವಿಧಾನಿಕ ಮೌಲ್ಯಗಳ ಸಮಿತಿ ಇದಾಗಿದ್ದು, ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಕಾರ್ಯವನ್ನು ಮಾಡಲಿದೆ ಎಲ್ಲಾ ಜಿಲ್ಲೆಗಳ ಜಿಪಂನ ಕಡತಗಳು ಶೀಘ್ರ ವಿಲೇವಾರಿ ಆಗಬೇಕು ಎಂದು ತಿಳಿಸಿದರು.

ಸಮಿತಿಯ ಸದಸ್ಯರಾಗಿರುವ ವಿಧಾನಸಭಾ ಸದಸ್ಯ ಎಂ.ಶ್ರೀನಿವಾಸ್, ವಿಧಾನ ಪರಿಷತ್​​ ಸದಸ್ಯರಾದ ಸಿ.ಎಂ. ಲಿಂಗಪ್ಪ, ಲಹರ್ ಸಿಂಗ್ ಸಿರೋಯಾ, ಜಯಮ್ಮ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.