ETV Bharat / state

ಪೊಲೀಸ್ ಕಾನ್ಸ್​ಟೇಬಲ್ ​​ಗೂ ಸೋಂಕು...ಚಾಮರಾಜನಗರ ಪೂರ್ವ ಠಾಣೆ ಸೀಲ್​​ಡೌನ್..! - police personal affected with corona

ಗಡಿಜಿಲ್ಲೆ ಚಾಮರಾಜನಗರದಲ್ಲಿ ಚೆಕ್​​ಪೋಸ್ಟ್​​ನಲ್ಲಿ ಕಾರ್ಯನಿರ್ಹಿಸಿದ್ದ ಪೊಲೀಸ್​ ಕಾನ್ಸ್​ಟೇಬಲ್ ​ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಚಾಮರಾಜನಗರ ಪೂರ್ವ ಪೊಲೀಸ್​ ಠಾಣೆಯನ್ನು ಸೀಲ್​ಡೌನ್​ ಮಾಡಲಾಗಿದೆ.

positive
ಪೊಲೀಸ್ ಕಾನ್​ಸ್ಟೆಬಲ್​​ಗೂ ಸೋಂಕು
author img

By

Published : Jun 23, 2020, 5:02 PM IST

ಚಾಮರಾಜನಗರ: ಜಿಲ್ಲೆಯ ಪೊಲೀಸ್ ಕಾನ್ಸ್​ಟೇಬಲ್ ಒಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಈಟಿವಿ ಭಾರತಕ್ಕೆ ಉನ್ನತ ಮೂಲಗಳು ತಿಳಿಸಿವೆ.

ಪೊಲೀಸ್ ಕಾನ್​ಸ್ಟೆಬಲ್​​ಗೂ ಸೋಂಕು
ಪುಣಜನೂರು ಚೆಕ್​​ಪೋಸ್ಟ್​​​ನಲ್ಲಿ ಕಾರ್ಯನಿರ್ವಹಿಸಿದ್ದ 29 ವರ್ಷದ ಪೊಲೀಸ್ ಪೇದೆಗೆ ಕೊರೊನಾ ಸೋಂಕು ತಗುಲಿದ್ದು, ಇವರು ಹನೂರು ತಾಲೂಕಿನ ರಾಮಾಪುರ ಸಮೀಪದ ಕೂಡ್ಲೂರು ಗ್ರಾಮದವರು ಎಂದು ತಿಳಿದುಬಂದಿದೆ. ಸದ್ಯ, ಪೇದೆಯ ಪ್ರಾಥಮಿಕ ಸಂಪರ್ಕಿತರನ್ನು ಆರೋಗ್ಯ ಇಲಾಖೆ ಪತ್ತೆಹಚ್ಚುತ್ತಿದ್ದು ಚಾಮರಾಜನಗರ ಪೂರ್ವ ಠಾಣೆಯನ್ನು ಸೀಲ್​​ಡೌನ್ ಮಾಡಲಾಗಿದೆ.ಪೇದೆಗೂ ಸೋಂಕು ತಗುಲುವ ಮೂಲಕ ಚಾಮರಾಜನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೇರಿದೆ. ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ಹಬ್ಬುತ್ತಿದ್ದು ಹಸಿರು ಜಿಲ್ಲೆ ಎಂಬ ಗರಿ ಹೊಂದಿದ್ದ ಚಾಮರಾಜನಗರವೀಗ ತಲ್ಲಣಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.