ETV Bharat / state

ಕರ್ತವ್ಯಕ್ಕೆ ಚಕ್ಕರ್​ ಆರೋಪ: ಐವರು ಕೋವಿಡ್ ಕ್ಯಾಪ್ಟನ್​ಗಳಿಗೆ ಚಾಮರಾಜನಗರ ಡಿಸಿ ನೋಟಿಸ್

author img

By

Published : Jun 3, 2021, 3:14 PM IST

ಕೋವಿಡ್ ಕ್ಯಾಪ್ಟನ್ ಆಗಿ ಜವಾಬ್ದಾರಿ ವಹಿಸಿದ್ದರೂ ಯಾವುದೇ ಪೂರ್ವಾನುಮತಿ ಪಡೆಯದೇ ಕರ್ತವ್ಯಕ್ಕೆ ಚಕ್ಕರ್ ಹೊಡೆದ 5 ಮಂದಿಗೆ ಕಾರಣ ಕೇಳಿ ಚಾಮರಾಜನಗರ ಡಿಸಿ ನೋಟೀಸ್​ ಜಾರಿ ಮಾಡಿದ್ದಾರೆ.

 ಚಾಮರಾಜನಗರ ಡಿಸಿ ನೋಟಿಸ್
ಚಾಮರಾಜನಗರ ಡಿಸಿ ನೋಟಿಸ್

ಚಾಮರಾಜನಗರ: ಕೊರೊನಾ ತಡೆಗೆ ಜಿಲ್ಲಾಡಳಿತ ರೂಪಿಸಿದ ಕೋವಿಡ್ ಕ್ಯಾಪ್ಟನ್ ಕಾರ್ಯಕ್ರಮ ಜಾರಿಯಾಗಿ ಒಂದು ವಾರವಾದರೂ ಕರ್ತವ್ಯಕ್ಕೆ ಹಾಜರಾಗದ ಐವರಿಗೆ ಚಾಮರಾಜನಗರ ಡಿಸಿ ಕಾರಣ ಕೇಳಿ ನೋಟಿಸ್ ಕೊಟ್ಟಿದ್ದಾರೆ.

ಕೋವಿಡ್ ಕ್ಯಾಪ್ಟನ್ ಆಗಿ ಜವಾಬ್ದಾರಿ ವಹಿಸಿದ್ದರೂ ಯಾವುದೇ ಪೂರ್ವಾನುಮತಿ ಪಡೆಯದೇ ಕರ್ತವ್ಯಕ್ಕೆ ಚಕ್ಕರ್ ಹೊಡೆದ ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ‌ ಸಹಾಯಕ ಪ್ರಾಧ್ಯಾಪಕರಾದ ಗುರುಪ್ರಸಾದ್, ಲೋಕೇಶ್, ಮಂಜುನಾಥ್, ತೆರಕಣಾಂಬಿ ಪಿಯು ಕಾಲೇಜಿನ ಉಪನ್ಯಾಸಕ ಭೈರವೇಶ್ವರ ಹಾಗೂ ಕಬ್ಬಹಳ್ಳಿ ಪಿಯು ಕಾಲೇಜಿನ ಉಪನ್ಯಾಸಕ ಲಿಂಗಾಂನದ್ ಎಂಬವರಿಗೆ ಕಾರಣ ಕೇಳಿ ನೋಟಿಸ್ ಕೊಟ್ಟಿದ್ದು, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ಕೊಟ್ಟಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ಜಾಗೃತಿ,‌ ಕೋವಿಡ್ ನಿಯಮ ಪಾಲನೆ ಮೇಲ್ವಿಚಾರಣೆ, ಗಂಟಲು ದ್ರವ ಪರೀಕ್ಷೆ ಮಾಡಿಸುವ ಕೆಲಸವನ್ನು ಕೋವಿಡ್ ಕ್ಯಾಪ್ಟನ್​ಗಳು ಮಾಡಬೇಕಿದ್ದು ಪ್ರತಿ ಗ್ರಾಪಂಗೆ ಒಂದರಂತೆ ಓರ್ವ ಕೋವಿಡ್ ಕ್ಯಾಪ್ಟನ್​ಗಳನ್ನು ನೇಮಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.