ಚಾಮರಾಜನಗರ: ಇಂದು ನಡೆದ ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ತೆರಕಣಾಂಬಿ ಜಿ.ಪಂ. ಕ್ಷೇತ್ರದ ಅಶ್ವಿನಿ ವಿಶ್ವನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚಾಮರಾಜನಗರ ಜಿ.ಪಂನ ಒಟ್ಟು 23 ಸದಸ್ಯರಲ್ಲಿ ಕಾಂಗ್ರೆಸ್ 14, ಬಿಜೆಪಿಯ 9 ಸದಸ್ಯರಿದ್ದಾರೆ. ಕಾಂಗ್ರೆಸ್ಗೆ ಸ್ಪಷ್ಟ ಬಹುಮತವಿದ್ದು ಜಿ.ಪಂ. ಅಧ್ಯಕ್ಷ ಸ್ಥಾನ ಈ ಬಾರಿ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿತ್ತು. ಕಾಂಗ್ರೆಸ್ ಆಂತರಿಕ ಒಪ್ಪಂದದಂತೆ ಮೂವರು ಸದಸ್ಯರಿಗೆ ಅಧಿಕಾರ ಹಂಚಿಕೆಯಾಗಿ ಕೊನೆ ಅವಧಿಗೆ ಬೊಮ್ಮಲಾಪುರದ ಅಶ್ಚಿನಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.
ಆರ್ಸಿ ಇಂದ ಅವಮಾನ ಅರೋಪ
ಇನ್ನು ನೂತನ ಜಿಪಂ ಅಧ್ಯಕ್ಷೆಯಾಗಿ ಘೋಷಣೆ ಮಾಡಿದ ಬಳಿಕ ಅಶ್ವಿನಿ ಅವರಿಗೆ ಶುಭಾಶಯ ತಿಳಿಸದೆ ಪ್ರಾದೇಶಿಕ ಆಯುಕ್ತ ಜಯರಾಂ ಹೊರ ನಡೆದಿದ್ದಕ್ಕೆ ಜಿ.ಪಂ. ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ.
ಇದುವರೆವಿಗೂ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದ ಬಳಿಕ ವೇದಿಕೆಗೆ ಕರೆದು ಹೂಗುಚ್ಛ ನೀಡಿ ಶುಭಾಶಯ ಹೇಳುವುದು ಸಂಪ್ರದಾಯ. ಆದರೆ, ಈ ಸಂಪ್ರದಾಯವನ್ನು ಮುರಿದು ಪ್ರಾದೇಶಿಕ ಆಯುಕ್ತರು ಅಧ್ಯಕ್ಷರಿಗೆ ಅವಮಾನ ಮಾಡಿದ್ದಾರೆಂದು ಸದಸ್ಯರು ಕಿಡಿಕಾರಿದರು.