ETV Bharat / state

16 ದಿನಗಳಲ್ಲಿ 28 ನೇ ಸ್ಥಾನದಿಂದ ನಂ 1 ಪಟ್ಟ: ಬೆಳೆ ಸಮೀಕ್ಷೆಯಲ್ಲಿ ಮಾದರಿಯಾದ ಗಡಿಜಿಲ್ಲೆ..!

ಚಾಮರಾಜನಗರ ಜಿಲ್ಲೆ ಬೆಳೆ ಸಮೀಕ್ಷೆಯಲ್ಲಿ 16 ದಿನಗಳಲ್ಲಿ 28 ನೇ ಸ್ಥಾನದಿಂದ ನಂ 1 ಪಟ್ಟಕ್ಕೇರಿದೆ.

Chamarajangar district number one, Chamarajangar district number one in Crop Survey, Crop Survey, Crop Survey 2020, Crop Survey 2020 news, ಚಾಮರಾಜನಗರ ಜಿಲ್ಲೆ ಬೆಳೆ ಸಮೀಕ್ಷೆಯಲ್ಲಿ ಮೊದಲನೇ ಸ್ಥಾನ, ಚಾಮರಾಜನಗರ ಜಿಲ್ಲೆಗೆ ಮೊದಲನೇ ಸ್ಥಾನ, ಬೆಳೆ ಸಮೀಕ್ಷೆ, ಬೆಳೆ ಸಮೀಕ್ಷೆ 2020, ಬೆಳೆ ಸಮೀಕ್ಷೆ 2020 ಸುದ್ದಿ,
ಬೆಳೆ ಸಮೀಕ್ಷೆಯಲ್ಲಿ ಮಾದರಿಯಾದ ಗಡಿಜಿಲ್ಲೆ
author img

By

Published : Sep 24, 2020, 7:58 PM IST

ಚಾಮರಾಜನಗರ: ಪಿಆರ್ ಸಮೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದ ಚಾಮರಾಜನರ ಈಗ ಬೆಳೆ ಸಮೀಕ್ಷೆಯಲ್ಲೂ ನಂ1 ಆಗಿದೆ.

ಕಳೆದ 8 ರಂದು ಬೆಳೆ ಸಮೀಕ್ಷೆಯಲ್ಲಿ 26ನೇ ಸ್ಥಾನದಲ್ಲಿದ್ದ ಚಾಮರಾಜನಗರ 16 ದಿನದ ಬಳಿಕ ಅಂದರೆ ಇಂದು ಎಲ್ಲ ಜಿಲ್ಲೆಗಳಿಗಿಂತ ವೇಗವಾಗಿ ಬೆಳೆ ಸಮೀಕ್ಷೆ ಮುಗಿಸುವ ಹಂತದಲ್ಲಿದೆ. 26 ನೇ ಸ್ಥಾನದಿಂದ 22ಕ್ಕೆ ಜಿಗಿತು. ಅದಾದ ಬಳಿಕ 15 ನಂತರ 8 ನೇ ಸ್ಥಾನ, 4, ಬುಧವಾರ 2 ಸ್ಥಾನದಲ್ಲಿದ್ದ ಚಾಮರಾಜನಗರ ಇಂದು ನಂ1 ಸ್ಥಾನಕ್ಕೇರಿದೆ. ದಿನಕ್ಕೆ ಸರಾಸರಿ 24 ಸಾವಿರ ಜಮೀನುಗಳನ್ನು ಅಪ್ಲೋಡ್ ಮಾಡುತ್ತಿದ್ದು, ಇನ್ನು ಕೇವಲ 58 ಸಾವಿರ ಜಮೀನುಗಳು ಬಾಕಿ ಇವೆ.

ಬೆಳೆ ಸಮೀಕ್ಷೆಯಲ್ಲಿ ಮಾದರಿಯಾದ ಗಡಿಜಿಲ್ಲೆ

ಈ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್.ಟಿ.ಚಂದ್ರಕಲಾ ಈಟಿವಿ ಭಾರತದೊಂದಿಗೆ ಮಾತನಾಡಿ, 4, 22, 386 ಪ್ಲಾಟ್​ಗಳಲ್ಲಿ ಈಗಾಗಲೇ ಪಿಆರ್ ಆ್ಯಪ್ ಮೂಲಕ ಶೇ. 63.16 ಹಾಗೂ ರೈತರ ಆ್ಯಪ್ ಮೂಲಕ ಶೇ. 23.07 ಸೇರಿದಂತೆ ಒಟ್ಟು ಶೇ‌.86.25 ರಷ್ಟು ಬೆಳೆ ಸಮೀಕ್ಷೆ ಮುಕ್ತಾಯವಾಗಿದೆ. ರೈತರ ಪರವಾಗಿ ಖಾಸಗಿ ನಿವಾಸಿಗಳು ಮಾಡುವ ಸರ್ವೇಯಲ್ಲಿ ಕಳೆದ ವಾರ ನಮ್ಮ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಈಗ, ಒಟ್ಟಾರೆ ಬೆಳೆ ಸಮೀಕ್ಷೆಯಲ್ಲೂ ನಾವು ಮೊದಲ ಸ್ಥಾನದಲ್ಲಿದ್ದು, ವಿಜಯಪುರ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 463 ಮಂದಿ ಪಿಆರ್​ಗಳಿದ್ದು, ರೈತರ ಪರವಾಗಿ ಇವರೇ ಬೆಳೆ ಸಮೀಕ್ಷೆಯನ್ನು ನಡೆಸಿ ಅಪ್ಲೋಡ್​​ ಮಾಡಲಿದ್ದಾರೆ. ಪಿಆರ್ ಆ್ಯಪ್ ಬಿಡುಗಡೆಯಾದ ಬಳಿಕ 2.66 ಲಕ್ಷ ಜಮೀನುಗಳನ್ನು ಸರ್ವೇ ಮಾಡಲಾಗಿದೆ‌‌. ಅಧಿಕಾರಿಗಳು ನಡೆಸುವ ಮೇಲ್ವಿಚಾರಣೆ ಸಮೀಕ್ಷೆಯಲ್ಲೂ ಉತ್ತಮ ವೇಗವಿದ್ದು, ನಾವೇ ಮೊದಲಿದ್ದೇವೆ. ಇನ್ನೆರಡು ದಿನಗಳಲ್ಲಿ ಸಮೀಕ್ಷೆಯೇ ಪೂರ್ಣವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಮೀಕ್ಷೆಯ ವೇಗಗತಿಗೆ ಇದೇ ಕಾರಣ

ಕೃಷಿ ಇಲಾಖೆಯಿಂದ ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಆ್ಯಪ್​ನಲ್ಲಿ ರೈತರಷ್ಟೇ ಸಮೀಕ್ಷೆ ಮಾಡಬೇಕಿತ್ತು. ಆದರೆ, ಎಲ್ಲ ರೈತರ ಬಳಿಯಲ್ಲೂ ಸ್ಮಾರ್ಟ್ ಫೋನ್ ಇಲ್ಲದಿರುವುದು, ರೈತರ ಪಾಲ್ಗೊಳ್ಳುವಿಕೆ ಕಡ್ಡಾಯವಾಗಿದ್ದು, ಜೊತೆಗೆ ನೆಟ್​ವರ್ಕ್​ ಸಮಸ್ಯೆಯಿಂದ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ತೀರಾ ಕುಂಠಿತವಾಗಿತ್ತು. ಸೆ. 8 ರವರೆಗೆ ಜಿಲ್ಲೆಯ ಸಮೀಕ್ಷೆ ಪ್ರಮಾಣ ಶೇ.20 ರಷ್ಟಿತ್ತು.

ಸೆ.13 ರಂದು ಪಿಆರ್ ಆಫ್ ಲೈನ್ ಆ್ಯಪ್ ಬಿಡುಗಡೆಯಾದ ಬಳಿಕ ರೈತರ ದೃಢೀಕರಣ ಪತ್ರ ಪಡೆದು ಸಮೀಕ್ಷೆ ನಡೆಸಲು ಅವಕಾಶ ಸಿಕ್ಕಿದ್ದು ಹಾಗೂ ಆ್ಯಪ್ ಆಫ್​ ಲೈನ್ ಆಗಿದ್ದರಿಂದ ಸಮೀಕ್ಷೆ ನಡೆಸಿ ನೆಟ್​​​​ವರ್ಕ್​​ ಸಿಗುವ ಕಡೆ ಒಂದೇ ಬಾರಿ ಅಪ್ಲೋಡ್​​ ಮಾಡಲು ಅವಕಾಶ ಸಿಕ್ಕಿದ್ದರಿಂದ ಸಮೀಕ್ಷೆ ವೇಗ ಪಡೆಯಿತು.

ಡಿಸಿ ಹಾಗೂ ಕೃಷಿ ಇಲಾಖೆ ಜೆಡಿ ಪಿಆರ್​ಗಳಿಗೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ನಿರ್ದಿಷ್ಟ ಗುರಿ ನೀಡಿದ್ದು, ಹಾಗೂ ರೈತರಿಗೆ ಜಾಗೃತಿ ಮೂಡಿಸಿದ್ದರಿಂದ ಬೆಳೆ ಸಮೀಕ್ಷೆಯಲ್ಲಿ ಗಡಿಜಿಲ್ಲೆ ಉತ್ತಮ ಸಾಧನೆ ತೋರಿದೆ. ಹೀಗಾಗಿ 26 ನೇ ಸ್ಥಾನದಲ್ಲಿದ್ದ ಜಿಲ್ಲೆ 16 ದಿನಗಳಲ್ಲಿ ನಂ1 ಸ್ಥಾನಕ್ಕೆ ಏರುವ ಮೂಲಕ ಇತರ ಜಿಲ್ಲೆಗಳಿಗೆ ಚಾಮರಾಜನಗರ ಮಾದರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.