ETV Bharat / state

ಚಾಮರಾಜನಗರ ದುರಂತ.. ಮುಸ್ಲಿಂ ಯುವಕರಿಂದ 18 ಮಂದಿ ಸೋಂಕಿತರ ಅಂತ್ಯಕ್ರಿಯೆ..

ಮೃತರಲ್ಲಿ ಹೆಚ್ಚಿನ ಮಂದಿ ಯುವಕರೇ ಆಗಿದ್ದು, ನಮಗೆ ಹೃದಯ ಭಾರವಾಗುತ್ತದೆ. ದೇಶ ಸೇವೆಗೆ ಇದಕ್ಕಿಂತ ಅವಕಾಶ ಸಿಗುವುದಿಲ್ಲ ಎಂದು ಈ ರೀತಿ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ ಅಂತ ಸಂಘಟನೆಯ ಮುಖ್ಯಸ್ಥರಾದ ಕಫಿಲ್ ಅಹಮ್ಮದ್, ಶೋಯೆಬ್ ತಿಳಿಸಿದರು..

Chamarajanagar Tragedy, Chamarajanagar Tragedy news, 18 members funeral completed by Muslim youths, Chamarajanagar news, Chamarajanagar corona news, ಚಾಮರಾಜನಗರ ದುರಂತ, ಚಾಮರಾಜನಗರ ದುರಂತ ಸುದ್ದಿ, 18 ಮಂದಿ ಸೋಂಕಿತರ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು, ಚಾಮರಾಜನಗರ ಸುದ್ದಿ, ಚಾಮರಾಜನಗರ ಕೊರೊನಾ ಸುದ್ದಿ,
18 ಮಂದಿ ಸೋಂಕಿತರ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು
author img

By

Published : May 3, 2021, 2:31 PM IST

ಚಾಮರಾಜನಗರ : ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿರುವ 24 ಮಂದಿ ಸಾವಿನ ಪ್ರಕರಣದಲ್ಲಿ 18 ಮಂದಿ ಸೋಂಕಿತರ ಅಂತ್ಯಸಂಸ್ಕಾರವನ್ನು ಪಿಎಫ್ಐ ಸಂಘಟನೆಯ ಯುವ ಕಾರ್ಯಕರ್ತರು ನೆರವೇರಿಸಿದ್ದಾರೆ.

ಒಂದು ತಂಡದಲ್ಲಿ ಐವರು ಯುವಕರಂತೆ ಗುಂಪುಗಳನ್ನು ರೂಪಿಸಿಕೊಂಡು ಬೆಳಗ್ಗೆಯಿಂದ ಮಧ್ಯಾಹ್ನ 2ರ ಹೊತ್ತಿಗೆ 18 ಮಂದಿ ಮೃತ ಸೋಂಕಿತರ ಅಂತ್ಯಸಂಸ್ಕಾರವನ್ನು ಮುಸ್ಲಿಂ ಯುವಕರು ನೆರವೇರಿಸಿದ್ದಾರೆ.

18 ಮಂದಿ ಸೋಂಕಿತರ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು

ಮಧ್ಯರಾತ್ರಿಯೇ ವೈದ್ಯರು ಕರೆಮಾಡಿ ಹೆಚ್ಚು ಸೋಂಕಿತರು ಮೃತಪಟ್ಟಿದ್ದು, ಹೆಚ್ಚಿನ ಯುವಕರ ಅಗತ್ಯವಿದೆ ಎಂದು ತಿಳಿಸಿದರು. ಅದರಂತೆ, ಸಂಘಟನೆಯ ಕಾರ್ಯಕರ್ತರನ್ನು ಕರೆತಂದು ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಾರೆ.

ಮೃತರಲ್ಲಿ ಹೆಚ್ಚಿನ ಮಂದಿ ಯುವಕರೇ ಆಗಿದ್ದು, ನಮಗೆ ಹೃದಯ ಭಾರವಾಗುತ್ತದೆ. ದೇಶ ಸೇವೆಗೆ ಇದಕ್ಕಿಂತ ಅವಕಾಶ ಸಿಗುವುದಿಲ್ಲ ಎಂದು ಈ ರೀತಿ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ ಅಂತ ಸಂಘಟನೆಯ ಮುಖ್ಯಸ್ಥರಾದ ಕಫಿಲ್ ಅಹಮ್ಮದ್, ಶೋಯೆಬ್ ತಿಳಿಸಿದರು.

ಚಾಮರಾಜನಗರ ಜಿಲ್ಲಾಸ್ಪತ್ರೆ ಆವರಣದಲ್ಲಿ ತಮ್ಮವರನ್ನು ಕಳೆದುಕೊಂಡ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.