ಚಾಮರಾಜನಗರ: ಲಾಕ್ ಡೌನ್ ಸಮಯದಲ್ಲಿ ನಮಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ, ಊಟಕ್ಕೂ ಕಷ್ಟವಾಗಿದೆ ಎಂದು ಜಿಲ್ಲೆಯ ಹನೂರು ತಾಲೂಕು ಲೊಕ್ಕನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇಬಿನ ಕೊಪ್ಪೆ ಹಾಡಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಹಾಡಿ ನಿವಾಸಿಗಳು ತಾವು ಸಂಕಷ್ಟ ಹಂಚಿಕೊಂಡ ವಿಡಿಯೋ ಒಂದನ್ನು 'ಕನ್ನಡ ಮನಸುಗಳು' ಎಂಬ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದೆ. 58 ಸೆಕೆಂಡ್ನ ಈ ವಿಡಿಯೋದಲ್ಲಿ ನಮಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ, ಭಾರೀ ಕಷ್ಟದಲ್ಲಿದ್ದೇವೆ. ಊಟಕ್ಕೂ ಪರದಾಡುವಂತಾಗಿದೆ. ಶಾಸಕರು, ಸಂಸದರು ಯಾರೂ ನಮ್ಮ ಕಡೆ ತಿರುಗಿ ನೋಡಿಲ್ಲ ಎಂದು ಹೇಳುವುದನ್ನು ಕಾಣಬಹುದು. ಈ ಟ್ವೀಟ್ ಅನ್ನು ಸಿಎಂ ಬಿಎಸ್ವೈ, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರಿಗೆ ಟ್ಯಾಗ್ ಮಾಡಲಾಗಿದೆ.
-
ಊಟಕ್ಕೆ ಗತಿ ಇಲ್ಲ 😞 ಸಿಬಿನಕೋಪೆ ಹಾಡಿ ಆದಿವಾಸಿಗಳು
— ಕನ್ನಡ ಮನಸುಗಳು (@kannadamanasug1) May 25, 2021 " class="align-text-top noRightClick twitterSection" data="
ಚಾಮರಾಜನಗರ ಜಿಲ್ಲೆ@nimmasuresh @mla_sudhakar @BSYBJP pic.twitter.com/xKrhU5KX0D
">ಊಟಕ್ಕೆ ಗತಿ ಇಲ್ಲ 😞 ಸಿಬಿನಕೋಪೆ ಹಾಡಿ ಆದಿವಾಸಿಗಳು
— ಕನ್ನಡ ಮನಸುಗಳು (@kannadamanasug1) May 25, 2021
ಚಾಮರಾಜನಗರ ಜಿಲ್ಲೆ@nimmasuresh @mla_sudhakar @BSYBJP pic.twitter.com/xKrhU5KX0Dಊಟಕ್ಕೆ ಗತಿ ಇಲ್ಲ 😞 ಸಿಬಿನಕೋಪೆ ಹಾಡಿ ಆದಿವಾಸಿಗಳು
— ಕನ್ನಡ ಮನಸುಗಳು (@kannadamanasug1) May 25, 2021
ಚಾಮರಾಜನಗರ ಜಿಲ್ಲೆ@nimmasuresh @mla_sudhakar @BSYBJP pic.twitter.com/xKrhU5KX0D
ಈ ಟ್ವೀಟ್ ಗಮನಿಸಿರುವ ರಾಜ್ಯ ಯುವ ಕಾಂಗ್ರೆಸ್ ಇಂದು ಸೇಬಿನ ಕೊಪ್ಪೆ ಹಾಡಿಗೆ ತೆರಳಿ, ಅಲ್ಲಿನ 62 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಿದೆ ಎಂಬ ಮಾಹಿತಿಯಿದೆ.
ಈ ಸುದ್ದಿಯನ್ನೂ ಓದಿ: ಆನೇಕಲ್: ಬಡ ಜನರಿಗೆ ಅರಣ್ಯಾಧಿಕಾರಿಗಳಿಂದ ಕಿರುಕುಳ ಆರೋಪ