ETV Bharat / state

ಮುಚ್ಚಿದ ಬಜಾರು, ಓಡಾತ್ತಿರುವ ಜನರು... ಇದು ಗಡಿಜಿಲ್ಲೆಯ ಲಾಕ್​ಡೌನ್​ ಪರಿ! - ಲಾಕ್​ಡೌನ್ 4.0ನ

ಹೋಟೆಲ್​ಗಳಲ್ಲಿ ಪಾರ್ಸೆಲ್ ಸೇವೆ, ಹಾಲು ಹಾಗೂ ಇನ್ನಿತರ ದಿನ್ಯನಿತ್ಯ ವಸ್ತುಗಳ ಅಂಗಡಿ ಮತ್ತು ಮೆಡಿಕಲ್ ಶಾಪ್ ಮಾತ್ರ ತೆರೆದಿತ್ತು. ಜೊತೆಗೆ, ಕೆಲ ಮಾಂಸದಂಗಡಿಗಳು ವ್ಯಾಪಾರ ನಡೆಸುತ್ತಿವೆ.

Chamarajanagar people not follow the lockdown order
ಮುಚ್ಚಿದ ಬಜಾರು, ಓಡಾತ್ತಿರುವ ಜನರು
author img

By

Published : May 24, 2020, 10:01 AM IST

Updated : May 24, 2020, 12:14 PM IST

ಚಾಮರಾಜನಗರ: ಲಾಕ್​ಡೌನ್ 4.0ನಲ್ಲಿ ರಾಜ್ಯ ಸರ್ಕಾರ ಸೂಚಿಸಿರುವ ಭಾನುವಾರ ಸಂಪೂರ್ಣ ಲಾಕ್​ಡೌನ್​ಗೆ ವರ್ತಕರೇನೋ ಎಲ್ಲಾ ಅಂಗಡಿಗಳನ್ನು ಮುಚ್ಚಿದ್ದಾರೆ. ಆದರೆ, ಜನರು ಮಾತ್ರ ತಮ್ಮ ಎಂದಿನ ಓಡಾಟ ಮುಂದುವರೆಸಿರುವುದು ಕಂಡುಬಂದಿತು.

ಅಂಗಡಿ ಬೀದಿ, ಪಿಡಬ್ಲೂಡಿ ಕಾಲನಿ ಬಿಟ್ಟರೆ ಭುವನೇಶ್ವರಿ ವೃತ್ತ, ಗುಂಡ್ಲುಪೇಟೆ ವೃತ್ತ, ಸಂತೇಮರಹಳ್ಳಿ ವೃತ್ತ, ರಥದ ಬೀದಿಯಲ್ಲಿ ಜನರು ಓಡಾಟ, ಗುಂಪು ಸೇರಿ ಅಲ್ಲಲ್ಲಿ ಮಾತನಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.

ಚಾಮರಾಜನಗರದಲ್ಲಿ ಲಾಕ್​ಡೌನ್

ಇನ್ನು, ಹೋಟೆಲ್​ಗಳಲ್ಲಿ ಪಾರ್ಸೆಲ್ ಸೇವೆ, ಹಾಲು ಹಾಗೂ ಇನ್ನಿತರ ದಿನ್ಯನಿತ್ಯ ವಸ್ತುಗಳ ಅಂಗಡಿ ಮತ್ತು ಮೆಡಿಕಲ್ ಶಾಪ್ ಮಾತ್ರ ತೆರೆದಿತ್ತು. ಜೊತೆಗೆ, ಕೆಲ ಮಾಂಸದಂಗಡಿಗಳು ವ್ಯಾಪಾರ- ವ್ಯವಹಾರ ಮಾಡಿದರು. ಸಿಎಂ ಬಿಎಸ್​ವೈ ಹೇರಿರುವ ಸಂಪೂರ್ಣ ಲಾಕ್​ಡೌನ್ ಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಗೆ ಜನರು ಉತ್ತಮವಾಗಿ ಸ್ಪಂದಿಸಿದ್ದರು‌.

Last Updated : May 24, 2020, 12:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.