ETV Bharat / state

ಚಾಮರಾಜನಗರ ಲೋಕಲ್​​​​ ಎಲೆಕ್ಷನ್​​: ಯಳಂದೂರಿನಲ್ಲಿ ಗರಿಷ್ಠ-ಗುಂಡ್ಲುಪೇಟೆಯಲ್ಲಿ ಕನಿಷ್ಠ ಮತದಾನ

ಚಾಮರಾಜನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಯಳಂದೂರಿನಲ್ಲಿ ಗರಿಷ್ಠ ಮತದಾನವಾಗಿದೆ ಹಾಗೂ ಗುಂಡ್ಲುಪೇಟೆಯಲ್ಲಿ ಕನಿಷ್ಠ ಮತದಾನವಾಗಿದೆ. ಇನ್ನು ಕೆಲವು ಕಡೆ ಇವಿಎಂ ಯಂತ್ರಗಳು ಕೈಕೊಟ್ಟಿದ್ದು ಬಿಟ್ಟರೆ ಮತದಾನ ಶಾಂತಿಯುತವಾಗಿ ನಡೆದಿದೆ.

ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ
author img

By

Published : May 30, 2019, 12:35 AM IST

ಚಾಮರಾಜನಗರ: ತೀವ್ರ ಕುತೂಹಲ ಕೆರಳಿಸಿದ್ದ ಲೋಕಲ್ ಚುನಾವಣೆಯ ಮತದಾನ ಶಾಂತಿಯುತವಾಗಿ ಮುಗಿದಿದ್ದು, ಅಭ್ಯರ್ಥಿಗಳ ಹಣೆಬರಹ ಇವಿಎಂ ಯಂತ್ರಗಳಲ್ಲಿ ಭದ್ರವಾಗಿದೆ.

ಗುಂಡ್ಲುಪೇಟೆ ಪುರಸಭೆಯ 23 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 76.09ರಷ್ಟು ಮತದಾನವಾಗಿದೆ. ಹನೂರು ಪಟ್ಟಣ ಪಂಚಾಯಿತಿ 13 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 80.12 ಮತದಾನವಾಗಿದ್ದು, ಯಳಂದೂರು ಪಟ್ಟಣ ಪಂಚಾಯಿತಿಯ 11 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 86.31 ರಷ್ಟು ಮತದಾನವಾಗಿದೆ. ಶೇಕಡಾವಾರು ಮತದಾನದಲ್ಲಿ ಯಳಂದೂರು ಹೆಚ್ಚಿದ್ದು, ಗುಂಡ್ಲುಪೇಟೆಯಲ್ಲಿ ಕನಿಷ್ಠ ಮತದಾನವಾಗಿದೆ.

ಚಾಮರಾಜನಗರ ಲೋಕಲ್​​ ಎಲೆಕ್ಷನ್

ಗುಂಡ್ಲುಪೇಟೆಯ ಹಲವು ವಾರ್ಡ್​ಗಳಲ್ಲಿ 5 ಗಂಟೆಯ ನಂತರವೂ ಮತದಾನ ಮುಂದುವರೆದಿತ್ತು. ಯಳಂದೂರು ಮತ್ತು ಹನೂರಿನ 2 ಬೂತ್​ಗಳಲ್ಲಿ ಇವಿಎಂ ಕೈಕೊಟ್ಟಿದ್ದು ಬಿಟ್ಟರೆ ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿದೆ.

Intro:ಚಾಮರಾಜನಗರ ಲೋಕಲ್ ಚುನಾವಣೆ: ಯಳಂದೂರಿನಲ್ಲಿ ಗರಿಷ್ಟ - ಗುಂಡ್ಲುಪೇಟೆಯಲ್ಲಿ ಕನಿಷ್ಠ ಮತದಾನ

ಚಾಮರಾಜನಗರ: ತೀವ್ರ ಕುತೂಹಲ ಕೆರಳಿಸಿದ್ದ ಲೋಕಲ್ ಚುನಾವಣೆಯ ಮತದಾನ ಶಾಂತಿಯುತವಾಗಿ ಮುಗಿದಿದ್ದು ಅಭ್ಯರ್ಥಿಗಳ ಹಣೆಬರಹ ಇವಿಎಂನಲ್ಲಿ ಭದ್ರವಾಗಿದೆ.

Body:
ಗುಂಡ್ಲುಪೇಟೆ ಪುರಸಭೆಯ ೨೩ ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಶೇ.೭೬.೦೯ರಷ್ಟು ಮತದಾನವಾಗಿದೆ. ಹನೂರು ಪಪಂ ೧೩ ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಶೇ. ೮೦.೧೩ ಮತದಾನವಾಗಿದ್ದು ಯಳಂದೂರು ಪಪಂನ ೧೧ ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಶೇ. ೮೬.೩೧ ರಷ್ಟು ಮತದಾನವಾಗಿದೆ. ಶೇಖಡವಾರು ಮತದಾನದಲ್ಲಿ ಯಳಂದೂರು ಹೆಚ್ಚಿದ್ದು ಗುಂಡ್ಲುಪೇಟೆಯಲ್ಲಿ ಕನಿಷ್ಟ ಮತದಾನವಾಗಿದೆ.

Conclusion:ಗುಂಡ್ಲುಪೇಟೆಯ ಹಲವು ವಾರ್ಡ್ ಗಳಲ್ಲಿ ೫.ಗಂಟೆಯ ನಂತರವೂ ಮತದಾನ ಮುಂದುವರೆದಿತ್ತು. ಯಳಂದೂರು ಮತ್ತು ಹನೂರಿನ ೨ ಬೂತ್ ಗಳಲ್ಲಿ ಇವಿಎಂ ಕೈಕೊಟ್ಟಿದ್ದನ್ನು ಬಿಟ್ಟರೇ ಎಲ್ಲೆಡೆ ಶಾಂತಿಯುತವಾಗಿ ಮತದಾನವಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.