ಚಾಮರಾಜನಗರ: ಮೂಗಿಗೆ ತುಪ್ಪ ಸವರಿ ಯಾಮಾರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಗಡುವಿಗೆ ತುಪ್ಪ ಸವರಿ ಸುಮ್ಮಾನಾಗಿದ್ದು, ಹೆದ್ದಾರಿ ಗಂಡಾಗುಂಡಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ.
ಬೆಂಗಳೂರು- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯ ಗುಂಡಿಯನ್ನು ತುರ್ತಾಗಿ 8-12 ದಿನದೊಳಗೆ ಮುಚ್ಚುವಂತೆ ಕಳೆದ 15 ರಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕಾಲಮಿತಿ ನೀಡಿದ್ದರು. ಅಧಿಕಾರಿಗಳು ಗುಂಡಿ ಮುಚ್ಚಲು ಮುಂದಾಗಿ 4-5 ಅಡಿ ಆಳದ ಗುಂಡಿಗಳಿಗೆ ಮಣ್ಣು ತುಂಬಿ ಜಾಣತನ ಪ್ರದರ್ಶಿಸಿದ್ದು, ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ.
ಗುಂಡಿಗಳಿಗೆ ಮಣ್ಣು ಸುರಿದು ಹೋಗಿದ್ದರಿಂದ ಬಿದ್ದ ಮಳೆಗೆ ರಾಡಿಯಾಗಿದೆ. ಇಂದು ಎರಡು ಲಾರಿಗಳು ಪಲ್ಟಿಯಾಗಿದ್ದು ಹಲವು ಹೂತುಕೊಂಡ ಪ್ರಸಂಗ ನಡೆದಿದೆ. ಸಚಿವರ ಆದೇಶಕ್ಕೆ ತುಪ್ಪ ಸವರಿದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದು, ಸಂಸದರ ಬಳಿಕ ಸುರೇಶ್ ಕುಮಾರ್ ನೀಡಿದ್ದ ಕಾಲಮಿತಿಗೂ ಕಿಮ್ಮತ್ತು ಇಲ್ಲದಂತಾಗಿದೆ.