ETV Bharat / state

ಗಡಿಜಿಲ್ಲೆ ಗ್ರಾಮ ಸಮರ.. ಮತದಾನದಲ್ಲಿ ಗಮನ ಸೆಳೆದ ಅಂಶಗಳು ಇವು! - Chamarajanagar Grama panchayat Election 2020

ಕೆರೆಹಳ್ಳಿಯಲ್ಲಿ ಮತಗಟ್ಟೆ ಕೇಂದ್ರದ ಬಳಿ ಕುಡಿಕೆಗಳನ್ನು ಬಿಸಾಡಿ ಹೋಗಿದ್ದು ಹಲವು ಅಭ್ಯರ್ಥಿಗಳಿಗೆ, ಮತದಾರರಿಗೆ ನಡುಕ ಹುಟ್ಟಿಸಿತ್ತು.‌ ಶ್ಯಾನಡ್ರಹಳ್ಳಿ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ, ಮೃತ್ಯಂಜಯ ಮನೆ ಮುಂದೆ ಹಾಗೂ ಪ್ರಮುಖ ಬೀದಿಗಳಲ್ಲಿ ನಿಂಬೆಹಣ್ಣು, ಕುಂಕುಮ, ಕುಡಿಕೆಗಳನ್ನು ಇಟ್ಟು ಭಯಭೀತಗೊಳಿಸಿದ್ದರು...

Chamarajanagar Grama panchayat Election
ಮತದಾನದಲ್ಲಿ ಗಮನ ಸೆಳೆದ ಅಂಶಗಳು
author img

By

Published : Dec 22, 2020, 10:40 PM IST

ಚಾಮರಾಜನಗರ: ಪ್ರತಿಷ್ಠಿತ ರಾಜಕೀಯ ಪಕ್ಷಗಳು ಮುಸುಕಿನ ಗುದ್ದಾಟ ನಡೆಸಿದ ಗ್ರಾಪಂ ಚುನಾವಣೆಯ ಮೊದಲನೆ ಹಂತ ಮುಕ್ತಾಯವಾಗಿದ್ದು, ಸ್ಟ್ರಾಂಗ್ ರೂಮ್​ನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.

ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ ನಡೆದ ಚುನಾವಣೆಯಲ್ಲಿ ಮತದಾರರು ಭರ್ಜರಿ ಪ್ರತಿಕ್ರಿಯೆಯನ್ನೇ ನೀಡಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಉತ್ಸಾಹದಾಯಕ ಮತದಾನ ಕಂಡುಬಂತು.

ವೃದ್ಧರ ಹವಾ-ಭೂರಿ ಭೋಜನ: ಜನತಂತ್ರದ ಹಬ್ಬದಲ್ಲಿ ಯುವಕರು ನಾಚುವಂತೆ ಹಿರಿಯ ನಾಗರಿಕರು ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು. ಇವರಲ್ಲಿ, ಮಲ್ಲಯ್ಯನಪುರ ಗ್ರಾಮದ ಮುದ್ದಮ್ಮ ಸಿದ್ದೇಗೌಡ ಮತ್ತು ಹಿರೇಬೇಗೂರಿನ ಮಾದಮ್ಮ ಎಂಬ ಶತಾಯುಷಿ ತಾಯಂದಿರು ಮತದಾನ ಮಾಡಿ ತಮ್ಮ ಆಸಕ್ತಿ ಇನ್ನು ಕುಂದಿಲ್ಲ ಎಂದು ಸಾಬೀತು ಪಡಿಸಿದರು. ಗಾಲಿಕುರ್ಚಿ ಸಹಾಯದಿಂದ ವಿಶೇಷ ಚೇತನರು ಮತದಾನ ಮಾಡಿ ತಾವು ಯಾರಿಗೂ ಕಮ್ಮಿಯಿಲ್ಲ ಎಂದು ತೋರಿಸಿದರು.

ಮತದಾನದಲ್ಲಿ ಗಮನ ಸೆಳೆದ ಅಂಶಗಳು
ಯುವ ಸಮಯದಾಯವೇ ಹೆಚ್ಚು ಈ ಬಾರಿ ಕಣಕ್ಕಿಳಿದಿದ್ದು, ಪ್ರಜಾತಂತ್ರದ ಶಕ್ತಿಯಾಗಿ ಹಿರಿಯರು ತಮ್ಮ ಹಕ್ಕುಗಳನ್ನು ಚಲಾಯಿಸಿದರು. ಇವರಲ್ಲಿ ಹಲವರು ಕಳೆದ 40 ವರ್ಷಗಳಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.
ತಾಲೂಕಿನ ಶಿವಪುರ ಗ್ರಾಪಂನಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಹೋಳಿಗೆ ಊಟ ಸಿದ್ಧಪಡಿಸಿ ನೀಡುವ ಮೂಲಕ ಗಮನ ಸೆಳೆಯಿತು. ಇದರೊಟ್ಟಿಗೆ, ಕಳೆದ 9 ತಿಂಗಳುಗಳಿಂದ ಬಂದ್ದಾಗಿದ್ದ ಬಿಸಿಯೂಟ ಅಡಿಗೆ ಮನೆ ಮತ್ತೇ ಕಾರ್ಯಚಟುವಟಿಕೆ ನಡೆಸಿತು.
ಸೋಂಕಿತರ ಮತದಾನ: ಕೊರೊನಾ ಕರಿಛಾಯೆಯ ನಡುವೆ ನಡೆದ ಗ್ರಾಪಂ ಚುನಾವಣೆ ಮೊದಲ ಹಂತದಲ್ಲಿಂದು ಬರೋಬ್ಬರಿ 28 ಮಂದಿ ಕೊರೊನಾ ಸೋಂಕಿತರು ಮತದಾನ ಮಾಡಿ 'ಪಾಸಿಟಿವ್ ಆ್ಯಟಿಟೂಡ್' ಪ್ರದರ್ಶನ ಮಾಡಿದ್ದಾರೆ. ಕೊನೆಯ 1 ಗಂಟೆ ಅವಧಿಯನ್ನು ಸೋಂಕಿತರು ಮತ್ತು ಶಂಕಿತರ ಮತದಾನಕ್ಕೆ ಮೀಸಲಾಗಿರಿಸಲಾಗಿತ್ತು. ಪಿಪಿಐ ಕಿಟ್ ಧರಿಸಿ ಮತಗಟ್ಟೆ ಅಧಿಕಾರಿಗಳು ಸುರಕ್ಷತಾ ನಿಯಮಗಳನ್ನು ಪಾಲಿಸಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದರು.
ಮಾಟ-ಮಂತ್ರ ಭಯ: ಹರವೆ ಹೋಬಳಿಯ ಕೆರೆಹಳ್ಳಿ ಹಾಗೂ ಗುಂಡ್ಲುಪೇಟೆ ತಾಲೂಕಿನ ಶ್ಯಾನಡ್ರಹಳ್ಳಿ ಗ್ರಾಮದಲ್ಲಿ ಮಾಟ-ಮಂತ್ರದ ಭಯ ಆವರಿಸಿದೆ. ಕೆರೆಹಳ್ಳಿಯಲ್ಲಿ ಮತಗಟ್ಟೆ ಕೇಂದ್ರದ ಬಳಿ ಕುಡಿಕೆಗಳನ್ನು ಬಿಸಾಡಿ ಹೋಗಿದ್ದು ಹಲವು ಅಭ್ಯರ್ಥಿಗಳಿಗೆ, ಮತದಾರರಿಗೆ ನಡುಕ ಹುಟ್ಟಿಸಿತ್ತು.‌ ಶ್ಯಾನಡ್ರಹಳ್ಳಿ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ, ಮೃತ್ಯಂಜಯ ಮನೆ ಮುಂದೆ ಹಾಗೂ ಪ್ರಮುಖ ಬೀದಿಗಳಲ್ಲಿ ನಿಂಬೆಹಣ್ಣು, ಕುಂಕುಮ, ಕುಡಿಕೆಗಳನ್ನು ಇಟ್ಟು ಭಯಭೀತಗೊಳಿಸಿದ್ದರು.
ಜಿಪಂ‌ ಅಧ್ಯಕ್ಷೆ, ಮಾಜಿ ಸಂಸದರ ಮತದಾನ: ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಜಿಪಂ ಅಧ್ಯಕ್ಷೆ ಎಂ.ಅಶ್ವಿನಿ ವಿಶ್ವನಾಥ್, ಚೌಡಹಳ್ಳಿ ಗ್ರಾಮದಲ್ಲಿ ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್, ಹೆಗ್ಗವಾಡಿ ಗ್ರಾಮದಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ ಮತದಾನ ಮಾಡಿದರು. ಜಿಪಂ‌ ಅಧ್ಯಕ್ಷೆ ಅಶ್ವಿನಿ ವಿಶ್ವನಾಥ್ ತಮ್ಮ ಕುಟುಂಬದ ಎಲ್ಲಾ ಸದಸ್ಯರೊಡಗೂಡಿ ಮತಗಟ್ಟೆಗೆ ಬರುವ ಮೂಲಕ ಗಮನ ಸೆಳೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.