ಚಾಮರಾಜನಗರ : ಹಗಲು ಹೊತ್ತಿನಲ್ಲಿ ಮೌನಹೊದ್ದು ಮಲಗುವ ಜಿಲ್ಲೆ ಸಂಜೆಯಾಗುತ್ತಿದ್ದಂತೆ ಗಿಜಿಗುಡುವ ಸಂತೆಯಾಗಿ ಮಾರ್ಪಡುತ್ತಿದ್ದು, ಸಾಮಾಜಿಕ ಅಂತರ ವಿಚಾರದಲ್ಲಿ ಜನತೆ ನಿರ್ಲಕ್ಷ್ಯವಹಿಸಿದ್ದಾರೆ.
ಅಗತ್ಯ ವಸ್ತುಗಳ ಅಂಗಡಿಗಳು, ಬೀದಿಬದಿ ತರಕಾರಿ ವ್ಯಾಪಾರ ಸಂಜೆ 5 ಗಂಟೆ ಆಗುತ್ತಿದ್ದಂತೆ ತೆರೆಯುವುದರಿಂದ ಒಂದೇ ಬಾರಿಗೆ ಜನರು ಮುಗಿಬೀಳುತ್ತಿದ್ದಾರೆ. ಇದರಿಂದ ಸಾಮಾಜಿಕ ಅಂತರ ತೋರುವ ಬಾಕ್ಸ್ಗಳು, ವೃತ್ತಗಳು ಬೈಕ್ ನಿಲ್ಲಿಸುವ ಜಾಗಗಳಾಗಿ ಮಾರ್ಪಡುತ್ತಿವೆ.
ಹಾಪ್ ಕಾಮ್ಸ್, ಮೆಡಿಕಲ್ ಸ್ಟೋರ್ಗಳಲ್ಲಿ ಕೊಂಚಮಟ್ಟಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡರೂ ಅಗತ್ಯ ವಸ್ತುಗಳನ್ನು ಕೊಳ್ಳುವ ಮಾರುಕಟ್ಟೆ, ನಗರಸಭೆ ಮುಂಭಾಗದಲ್ಲಿ ಜನಜಾತ್ರೆಯೇ ನೆರೆಯುತ್ತಿದ್ದು, ಲಾಕ್ಡೌನ್ ಮಾಡಿರುವ ಉದ್ದೇಶವೇ ವಿಫಲವಾದಂತಿದೆ.
ಔಷಧ ಸಿಂಪಡನೆ:
ಇನ್ನು ನಗರಸಭೆ ವತಿಯಿಂದ ಜಿಲ್ಲಾಕೇಂದ್ರದ ಎಲ್ಲಾ ರಸ್ತೆಗಳು, ಮಳಿಗೆಗಳ ಮುಂಭಾಗ, ಜನ ಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಔಷಧ ಸಿಂಪಡಿಸಲಾಗಿದೆ.