ETV Bharat / state

ತೆರಿಗೆ ರಿಜಿಸ್ಟ್ರಾರ್ ತಿದ್ದುಪಡಿ: ನಗರಸಭೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಡಿಸಿ ಸೂಚನೆ - ಇಬ್ಬರು ನಗರಸಭೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಡಿಸಿ ಸೂಚನೆ

ಇಬ್ಬರು ನಗರಸಭೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪೌರಾಯುಕ್ತ ಹಾಗೂ ಎಸ್​​ಪಿಗೆ ಸೂಚಿಸಿದ್ದಾರೆ.

Chamarajanagar
ಚಾಮರಾಜನಗರ
author img

By

Published : Jun 5, 2022, 11:09 AM IST

ಚಾಮರಾಜನಗರ: ಸದಾ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವ ಚಾಮರಾಜನಗರ ನಗರಸಭೆ ಸಿಬ್ಬಂದಿ ಕಾರ್ಯವೈಖರಿಯ ಮತ್ತೊಂದರ ಕರ್ಮಕಾಂಡ ಬಯಲಾಗಿದ್ದು, ಕ್ರಿಮಿನಲ್ ಕೇಸ್ ಹಾಕಲು ಡಿಸಿ ಸೂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಚಾಮರಾಜನಗರ ನಗರಸಭೆಯಲ್ಲಿ ವಿಷಯ ನಿರ್ವಾಹಕರಾಗಿದ್ದ ಪ್ರಸ್ತುತ ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಎಸ್​ಡಿಎ ಆಗಿರುವ ಸಿ.ಎಂ.ಗುಣಶ್ರೀ ಹಾಗೂ ಕಚೇರಿ ವ್ಯವಸ್ಥಾಪಕಿ ಮರ್ಸಿರೀಟಾ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪೌರಾಯುಕ್ತ ಹಾಗೂ ಎಸ್​​ಪಿಗೆ ಸೂಚಿಸಿದ್ದಾರೆ.

ಏನಿದು ಪ್ರಕರಣ: ಗುಣಶ್ರೀ ಮತ್ತು ಮರ್ಸಿರೀಟಾ ಅವರು ನಗರಸಭೆ ವ್ಯಾಪ್ತಿಗೆ ಒಳಪಡುವ ಒಟ್ಟು 14 ಆಸ್ತಿ ತೆರಿಗೆ ಕಡತಗಳನ್ನು ವೈಟ್ನರ್ ಬಳಸಿ ತಿದ್ದುಪಡಿ ಮಾಡಿ ಬೇರೆಯವರ ಹೆಸರಿಗೆ ವಿಭಾಗಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆ ಡಿಸಿ ಇಬ್ಬರಿಗೂ ಬಿಸಿ ಮುಟ್ಟಿಸಿದ್ದಾರೆ.

Chamarajanagar
ಇಬ್ಬರು ನಗರಸಭೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಡಿಸಿ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.