ETV Bharat / state

ಚಾಮರಾಜನಗರದಲ್ಲಿ ಏರುತ್ತಿರುವ ಕೊರೊನಾ: ಜಿಲ್ಲಾಡಳಿತ ಭವನಕ್ಕೂ ತಟ್ಟಿದ ಭೀತಿ!

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದೇ ಪ್ರವೇಶದ್ವಾರದ ಮೂಲಕ ಬರುವ ಜನರನ್ನು ಸ್ಕ್ರೀನಿಂಗ್​ಗೆ ಒಳಪಡಿಸಿದ ಬಳಿಕವಷ್ಟೇ ಕಚೇರಿ ಒಳಗೆ ಬಿಡಲಾಗುತ್ತಿದೆ.

door
door
author img

By

Published : Jun 24, 2020, 1:37 PM IST

ಚಾಮರಾಜನಗರ: ನಿತ್ಯ ನೂರಾರು ಮಂದಿ ಬರುವ ಜಿಲ್ಲಾಡಳಿತ ಭವನಕ್ಕೂ ಈಗ ಕೊರೊನಾ ಭಯ ಆವರಿಸಿದ್ದು, ಜಿಲ್ಲಾಡಳಿತ ಭವನ ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ಬಾಗಿಲನ್ನು ಸೀಮಿತಗೊಳಿಸಲಾಗಿದೆ.

ಜಿಲ್ಲಾಡಳಿತ ಭವನಕ್ಕೆ ಒಟ್ಟು 6 ಬಾಗಿಲಗಳಿದ್ದು, ಜನರು ಮತ್ತು ಅಧಿಕಾರಿಗಳು ತಮ್ಮಿಚ್ಛೆ ಬಂದ ರೀತಿ ಓಡಾಡುತ್ತಿದ್ದರು. ಆದರೆ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದೇ ಪ್ರವೇಶದ್ವಾರದ ಮೂಲಕ ಬರುವ ಜನರನ್ನು ಸ್ಕ್ರೀನಿಂಗ್​ಗೆ ಒಳಪಡಿಸಿದ ಬಳಿಕವಷ್ಟೇ ಕಚೇರಿ ಒಳಗೆ ಬಿಡಲಾಗುತ್ತಿದೆ.

chamarajanagar corona update
ಜಿಲ್ಲಾಡಳಿತ ಭವನಕ್ಕೆ ಕೊರೊನಾ ಭೀತಿ

ಈ ಹಿಂದಿನಿಂದಲೂ ಸ್ಕ್ರೀನಿಂಗ್ ಮಾಡುತ್ತಿದ್ದರೂ ಇತರ ಬಾಗಿಲುಗಳಿಂದಲೂ ಜನರು ಪ್ರವೇಶಿಸುತ್ತಿದ್ದರು. ಮುಖ್ಯದ್ವಾರದಲ್ಲಿ ಬರುವವರಿಗೆ ಮಾತ್ರ ಸ್ಕ್ರೀನಿಂಗ್ ನಡೆಸಲಾಗುತ್ತಿದ್ದು ಈಗ ಎಲ್ಲರೂ ಮುಖ್ಯದ್ವಾರದಿಂದ ಬರಬೇಕಿದ್ದರಿಂದ ಕೊರೊನಾ ನಿಗಾ ಹೆಚ್ಚಾಗಿದೆ.

ನಗರದ ಪೊಲೀಸ್ ಠಾಣೆಗಳಲ್ಲೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ದೂರುಗಳನ್ನು ಪಡೆಯಲು ಕೌಂಟರ್ ರೀತಿ ವ್ಯವಸ್ಥೆ ಮಾಡಲಾಗಿದೆ‌.‌ ಒಟ್ಟಿನಲ್ಲಿ ಹಸಿರು ವಲಯವಾಗಿದ್ದ ವೇಳೆ ನಿರಾಂತಕವಾಗಿದ್ದ ಜನರು ಈಗ ಬೆಚ್ಚಿ ಬಿದ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.