ETV Bharat / state

'24 ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆಯೂ ಕಾರಣ, ಸರ್ಕಾರವೇ ನೇರ ಹೊಣೆ' - ಶಾಸಕ ಪುಟ್ಟರಂಗಶೆಟ್ಟಿ,

ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್​ಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಹೀಗಾಗಿ, ಅವರಿಗೆ ನಾನು ಫೋನ್ ಮಾಡುತ್ತಿಲ್ಲ. ಅವರು ಜಿಲ್ಲೆಯ ಉಸ್ತುವಾರಿ ಹೊತ್ತುಕೊಂಡು ಏನು ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

Chamarajanagar corona patients died, Chamarajanagar corona patients died case, MLA Puttarangashetty reaction about Chamarajanagar corona patients died case, MLA Puttarangashetty, MLA Puttarangashetty news, ಚಾಮರಾಜನಗರ ಕೋವಿಡ್​ ರೋಗಿಗಳು ಸಾವು,  ಚಾಮರಾಜನಗರ ಕೋವಿಡ್​ ರೋಗಿಗಳು ಸಾವು ಪ್ರಕರಣ, ಚಾಮರಾಜನಗರ ಕೋವಿಡ್​ ರೋಗಿಗಳು ಸಾವು ಪ್ರಕರಣ ಬಗ್ಗೆ ಶಾಸಕ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ, ಶಾಸಕ ಪುಟ್ಟರಂಗಶೆಟ್ಟಿ,  ಶಾಸಕ ಪುಟ್ಟರಂಗಶೆಟ್ಟಿ ಸುದ್ದಿ,
ಈ ಘಟನೆಗೆ ಸರ್ಕಾರವೇ ಹೊಣೆ ಎಂದ ಶಾಸಕ ಪುಟ್ಟರಂಗಶೆಟ್ಟಿ
author img

By

Published : May 3, 2021, 12:18 PM IST

Updated : May 3, 2021, 1:40 PM IST

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿರುವ ಸಾವುಗಳಿಗೆ ಸರ್ಕಾರವೇ ಹೊಣೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಆರೋಪಿಸಿದರು.

24 ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆಯೂ ಕಾರಣ, ಸರ್ಕಾರವೇ ನೇರ ಹೊಣೆ ಎಂದ ಶಾಸಕ

ಜಿಲ್ಲಾಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯರಾತ್ರಿಯಿಂದಲೂ ಸರ್ವ ಪ್ರಯತ್ನ ಪಟ್ಟು ಆಕ್ಸಿಜನ್ ತರಿಸಿದ್ದೇವೆ. ಸರ್ಕಾರ ನೇರವಾಗಿ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಸಬೇಕು. ಮೈಸೂರಿನಿಂದ ಏಕೆ ಪೂರೈಸುತ್ತಿದೆ?. ಅಲ್ಲಿನ ಡಿಸಿ ಜಿಲ್ಲೆಗೆ ಹೆಚ್ಚು ಒತ್ತು ಕೊಟ್ಟಾಗ ನಮಗೆಲ್ಲಿ ಆಕ್ಸಿಜನ್​ ಸಿಗುತ್ತದೆ. ಈ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್​ಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಹೀಗಾಗಿ, ಅವರಿಗೆ ನಾನು ಫೋನ್ ಮಾಡುತ್ತಿಲ್ಲ. ಉಸ್ತುವಾರಿ ಹೊತ್ತುಕೊಂಡು ಅವರು ಏನು ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ.

ಆಮ್ಲಜನಕದ ಕೊರತೆ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದು, ಹಾಸಿಗೆಗಳ ಸಂಖ್ಯೆ ಹೆಚ್ಚಿಸಬೇಕು, ನೇರವಾಗಿ ಆಮ್ಲಜನಕ ಪೂರೈಸಬೇಕೆಂದು ಒತ್ತಾಯಿಸಿದ್ದೇನೆ ಎಂದು ಶಾಸಕರು ತಿಳಿಸಿದರು.

Last Updated : May 3, 2021, 1:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.