ಚಾಮರಾಜನಗರ: ಏಕಾಏಕಿ ಬಂಡೀಪುರ ಸಫಾರಿ ದರವನ್ನು ಏರಿಕೆ ಮಾಡಿದ್ದು, ಪ್ರವಾಸಿಗರು ಅರಣ್ಯ ಇಲಾಖೆ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಮ ವರ್ಗದವರಿಗೆ ಸಫಾರಿ ಎಟುಕದಂತಾಗಿದೆ.
ಈ ಹಿಂದೆ ಪ್ರವೇಶ ಶುಲ್ಕ 250 ರೂ., ಸಫಾರಿಗೆ 100 ರೂ. ಇತ್ತು. ಆದರೆ ಈಗ ಪ್ರವೇಶ ಶುಲ್ಕ 300 ರೂ. ಹಾಗೂ ಸಫಾರಿಗೆ 300 ರೂ. ತೆರಬೇಕಿದ್ದು 350 ರೂ.ನಲ್ಲಿ ವನ್ಯ ಸಂಪತ್ತು ನೋಡುತ್ತಿದ್ದ ಪ್ರವಾಸಿಗರು ಈಗ 600 ರೂ. ತೆರಬೇಕಿದೆ. ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ 500 ರೂ., ಸಫಾರಿಗೆ 500 ರೂ.ನಂತೆ ತಲಾ ಓರ್ವರಿಗೆ 1000 ರೂ. ಕೊಡಬೇಕೆಂದು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಸಫಾರಿಗೆ ಜಿಪ್ಸಿ ಬಾಡಿಗೆ 3 ಸಾವಿರದಿಂದ 3500 ರೂ., 9 ಸೀಟಿನ ಕ್ಯಾಂಪರ್ 5 ಸಾವಿರ ರೂ.ಯಿಂದ 7 ಸಾವಿರ ರೂ. ಆಗಿದೆ. ವಿದೇಶಿಗರಿಗೆ ಜಿಪ್ಸಿಗೆ 5 ಸಾವಿರ ಹಾಗೂ ಕ್ಯಾಂಪರ್ಗೆ 7 ಸಾವಿರ ರೂ.ಗೆ ಏರಿಕೆಯಾಗಿದ್ದು, ಪಾರ್ಕಿಂಗ್ ಶುಲ್ಕ ಕೂಡ ಏರಿಕೆ ಮಾಡಲಾಗಿದೆ.
ಓದಿ: ಬಂಡೀಪುರದ ಕರಡಿಕಲ್ಲು ಬೆಟ್ಟದಲ್ಲಿ ಬೆಂಕಿ: ಅಪಾರ ಅರಣ್ಯ ಬೆಂಕಿಗಾಹುತಿ