ETV Bharat / state

ಹುರುಳಿ ಸೆತ್ತೆಯಿಂದಾಗಿ ಹೊತ್ತಿ ಉರಿದ ಕಾರು: ಪ್ರಾಣಾಪಾಯದಿಂದ 6 ಮಂದಿ ಪಾರು - ರಸ್ತೆಯಲ್ಲಿ ಒಕ್ಕಣೆ ಮಾಡಲುನಿರ್ಬಂಧ

ಹೊಸ ವರ್ಷಾಚರಣೆಗೆ ಕೇರಳದಿಂದ ಬಂದಿದ್ದ 6 ಮಂದಿ ಯುವಕರು ಬಂಡೀಪುರದಲ್ಲಿ ಸುತ್ತಾಡಿ, ಹೊನ್ನೇಗೌಡನಹಳ್ಳಿ-ಗೋಪಾಲಪುರ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಭಾರಿ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.

car
ಹೊತ್ತಿ ಉರಿದ ಕಾರು
author img

By

Published : Jan 2, 2023, 7:28 AM IST

Updated : Jan 2, 2023, 9:05 AM IST

ರಸ್ತೆಯಲ್ಲಿ ಹುರುಳಿ ಸತ್ತೆ; ತಪ್ಪಿದ ಅವಘಡ

ಚಾಮರಾಜನಗರ: ರಸ್ತೆಯಲ್ಲಿ ಹಾಕಿದ್ದ ಹುರುಳಿ ಸೆತ್ತೆ ಕಾರಿನ ಚಕ್ರಕ್ಕೆ ಸಿಲುಕಿಕೊಂಡು ಕಾರೊಂದು ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ-ಗೋಪಾಲಪುರ ರಸ್ತೆಯಲ್ಲಿ ನಡೆದಿದೆ. ಕೇರಳದ ನೋಂದಣಿ ಹೊಂದಿರುವ ಕಾರೊಂದು ಹೊನ್ನೇಗೌಡನಹಳ್ಳಿ-ಗೋಪಾಲಪುರ ರಸ್ತೆಯಲ್ಲಿ ಸಂಚರಿಸುತ್ತಿತ್ತು. ರಸ್ತೆ ಮೇಲೆ ಹಾಕಿದ್ದ ಹುರುಳಿ ಸೆತ್ತೆ ಕಾರಿನ ಚಕ್ರಕ್ಕೆ ಸುತ್ತಿಕೊಂಡಿದೆ.‌ ಕ್ಷಣಮಾತ್ರದಲ್ಲೇ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ 6 ಮಂದಿ ಯುವಕರು ತಮ್ಮ ವಸ್ತುಗಳ‌ ಸಮೇತ ಕೆಳಗಿಳಿದಿದ್ದಾರೆ.

ನೋಡು ನೋಡುತ್ತಿದ್ದಂತೆ ಕಾರಿಗೆ ಬೆಂಕಿ ಆವರಿಸಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳದಲ್ಲಿದ್ದ ಕೆಲವರು ಬೆಂಕಿ ನಂದಿಸಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ರಸ್ತೆಯಲ್ಲಿ ಹಾಕಿದ್ದ ಹುರುಳಿ ಒಕ್ಕಣೆಯಿಂದ ಕಾಣಿಸಿಕೊಂಡ ಬೆಂಕಿ: ಓಮ್ನಿ ಸಂಪೂರ್ಣ ಭಸ್ಮ

ಕಳೆದ 2019 ರಲ್ಲಿ ಸಹ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡಿದ್ದ ಕಾರಣ ಕೇರಳ ರಾಜ್ಯದವರಿಗೆ ಸೇರಿದ ಮಾರುತಿ ವ್ಯಾನ್​​ ಹೊತ್ತಿ ಉರಿದಿತ್ತು. ಹುರುಳಿ ಸೊಪ್ಪು ವ್ಯಾನ್​ನ ಚಕ್ರಕ್ಕೆ ಸಿಲುಕಿಕೊಂಡು ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಸೇರಿದಂತೆ ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು. ಇದರೊಟ್ಟಿಗೆ, ಒಕ್ಕಣೆಗೆ ಹಾಕಿದ್ದ ಹುರುಳಿ ಸೊಪ್ಪು ಕೂಡ ಸಂಪೂರ್ಣ ಭಸ್ಮವಾಗಿತ್ತು.

ಕಳೆದ ವರ್ಷದ ಜನವರಿಯಲ್ಲಿ ಸಹ ಮೃಸೂರಿನಲ್ಲಿ ಇಂತಹದ್ದೇ ಘಟನೆ ಜರುಗಿತ್ತು. ನಂಜನಗೂಡು ತಾಲೂಕಿನ ಬದನವಾಳು-ದೇವನೂರು ಗ್ರಾಮದಲ್ಲಿ ರಸ್ತೆ ಮೇಲೆ ಹಾಕಿದ್ದ ಹುರುಳಿ ಒಕ್ಕಣೆಯಿಂದ ಓಮ್ನಿ ಕಾರಿಗೆ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣವಾಗಿ ಸುಟ್ಟು ಕರಲಾಗಿತ್ತು.

ಇದನ್ನೂ ಓದಿ: ರಸ್ತೆಯಲ್ಲಿ ನಿಲ್ಲದ ಒಕ್ಕಣೆ... ಹುರುಳಿ ಸೊಪ್ಪಿನಿಂದ ಹೊತ್ತಿ ಉರಿದ ಮಾರುತಿ ವ್ಯಾನ್

ವಾಹನ ಸವಾರರ ಆಕ್ರೋಶ: ರಸ್ತೆಯಲ್ಲಿ ಒಕ್ಕಣೆಯನ್ನು ನಿರ್ಬಂಧಿಸಿದ್ದರೂ ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ರೈತರು ಕಾನೂನನ್ನು ಗಾಳಿಗೆ ತೂರಿ ಒಕ್ಕಣೆ ಮಾಡುತ್ತಿರುವುದು ಕಂಡು ಬರುತ್ತಿದೆ. ಕೆಲ ರೈತರಿಗೆ ಸ್ವಂತ ಕಣ ಇದ್ದರೂ ಕೂಡ ಹೆಚ್ಚಿನ ರೈತರು ನೇರವಾಗಿ ಹುರುಳಿಯನ್ನು ತಂದು ರಸ್ತೆಗೆ ಹಾಕುತ್ತಾರೆ. ಇದರ ಮೇಲೆ ವಾಹನಗಳು ಹಾದು ಹೋದಾಗ ಕಾಳುಗಳು ಉದುರುತ್ತವೆ. ಆ ನಂತರ ಬಳ್ಳಿಗಳನ್ನು ತೆಗೆದು ಕಾಳುಗಳನ್ನು ತೆಗೆದು ಸ್ವಚ್ಛಗೊಳಿಸಿ ಚೀಲಗಳಲ್ಲಿ ತುಂಬಿಸಿ ಮನೆಗೆ ಕೊಂಡೊಯ್ಯುತ್ತಾರೆ.

ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡದಂತೆ ಈಗಾಗಲೇ ಪೊಲೀಸರು ಸೂಚನೆ ನೀಡಿದ್ದರೂ ಸಹ ರೈತರು ಒಕ್ಕಣೆಗೆ ಕಣ ಮಾಡದೇ ರಸ್ತೆಯಲ್ಲಿ ಹಾಕುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಳಬೇಕೆಂದು ಸವಾರರು ಮನವಿ ಮಾಡಿದ್ದಾರೆ.

Last Updated : Jan 2, 2023, 9:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.