ಚಾಮರಾಜನಗರ: ತನ್ನ ವಿರುದ್ಧ ಕೈ ಅಭ್ಯರ್ಥಿ ಸೇರಿದಂತೆ ಮುಖಂಡರು ಅಪಪ್ರಚಾರ ನಡೆಸಿದ್ದಾರೆಂದು ಚಾಮರಾಜನಗರ BSP ಅಭ್ಯರ್ಥಿ ಹ.ರಾ. ಮಹೇಶ್ ದೂರು ನೀಡಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಚಾಮರಾಜನಗರ ಕೈ ಅಭ್ಯರ್ಥಿ ಸಿ. ಪುಟ್ಟರಂಗಶೆಟ್ಟಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ನಂಜುಂಡಸ್ವಾಮಿ ಮತ್ತು ಬಿ.ಕೆ. ರವಿಕುಮಾರ್ ವಿರುದ್ಧ ದೂರು ದಾಖಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಸೇರಿದಂತೆ ಮುಖಂಡರು ತಮ್ಮ ವಿರುದ್ಧ ಅಪಪ್ರಚಾರ ನಡೆಸಿದ್ದು, ಕೆಟ್ಟ ಪದಗಳನ್ನು ಬಳಸಿ ಅಪಮಾನ ಮಾಡಿದ್ದಾರೆ. ಸುಳ್ಳು ಕರಪತ್ರಗಳನ್ನು ಹಂಚಿ ತನಗೆ ಹಾಗೂ ಪಕ್ಷಕ್ಕೆ ತೇಜೋವಧೆ ಮಾಡಿದ್ದಾರೆಂದು BSP ಅಭ್ಯರ್ಥಿ ಹ.ರಾ. ಮಹೇಶ್ ಅವರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ದೂರು ಪಡೆದುಕೊಂಡ ಚುನಾವಣಾ ಇಲಾಖೆಯು ನಾಲ್ವರ ವಿರುದ್ಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಇದನ್ನೂಓದಿ:ಮತದಾನಕ್ಕೆ ಮದುವೆ ಮಾದರಿ ಆಮಂತ್ರಣ ಪತ್ರಿಕೆ: ಉಡುಗೊರೆ ಕೊಡಬೇಡಿ, ಪಡೆಯಬೇಡಿ.. ವೋಟಿಂಗ್ ಮರೆಯಲೇಬೇಡಿ