ETV Bharat / state

ಬಿಜೆಪಿ ಕಾರ್ಯಕಾರಿಣಿ: ಶಾಸಕ ಮಹೇಶ್ ಗೆಲುವಿನ ನಗೆ: ಸಚಿವ ಸೋಮಣ್ಣ ಟಾಂಗ್ - ಪರೋಕ್ಷವಾಗಿ ಶಾಸಕ ಮಹೇಶ್ ಅವರಿಗೆ ಟಾಂಗ್

ಚಾಮರಾಜನಗರದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಎಷ್ಟು ಬೈ ಎಲೆಕ್ಷನ್ ಆದರೂ ಗೆಲ್ಲಬಹುದು. ಆದರೆ, ಮುಖ್ಯ ಚುನಾವಣೆ ಆಗಲ್ಲ ಎಂದು ಸಚಿವ ಸೋಮಣ್ಣ ಪರೋಕ್ಷವಾಗಿ ಶಾಸಕ ಎನ್.ಮಹೇಶ್ ಅವರಿಗೆ ಟಾಂಗ್ ಕೊಟ್ಟರು.

V Somanna Minister of Housing and Infrastructure Development
ವಿ ಸೋಮಣ್ಣ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರು
author img

By

Published : Nov 15, 2022, 3:30 PM IST

Updated : Nov 15, 2022, 4:19 PM IST

ಚಾಮರಾಜನಗರ: ಎಷ್ಟು ಬೈ ಎಲೆಕ್ಷನ್ ಆದರೂ ಗೆಲ್ಲಬಹುದು. ಆದರೆ, ಮೇನ್ ಚುನಾವಣೆ ಆಗಲ್ಲ ಎಂದು ಸಚಿವ ಸೋಮಣ್ಣ ಪರೋಕ್ಷವಾಗಿ ಶಾಸಕ ಮಹೇಶ್ ಅವರಿಗೆ ಟಾಂಗ್ ಕೊಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿ, ಕೊಳ್ಳೇಗಾಲ ನಗರಸಭೆ ಉಪ ಚುನಾವಣೆಯಲ್ಲಿ 7 ರಲ್ಲಿ 6 ಗೆದ್ದೆವು ಎಂದು ಹೇಳುತ್ತಿದ್ದರು. ಆದರೆ, ವಿಧಾನಸಭಾ ಚುನಾವಣೆ ಗೆಲ್ಲುವುದು ಸುಲಭವಲ್ಲ ಎಂದು ಶಾಸಕ ಎನ್. ಮಹೇಶ್ ಅವರಿಗೆ ವೇದಿಕೆಯಲ್ಲೇ ಠಕ್ಕರ್ ಕೊಟ್ಟಿದ್ದಾರೆ.

ಶಾಸಕ ಎನ್.ಮಹೇಶ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ಸೋಮಣ್ಣ

‌ಕಳೆದ ಲೋಕಸಭಾ ಚುನಾವಣೆಯಲ್ಲಿ ವಿ ಶ್ರೀನಿವಾಸಪ್ರಸಾದ್ ಅವರು ಸ್ಪರ್ಧಾಳು ಆಗದಿದ್ದರೆ ವಾತಾವರಣ ಬೇರೆಯೇ ಆಗಿರುತ್ತಿತ್ತು ಎಂದು ಹೇಳಿದರು. ಪ್ರಸಾದ್ ಅವರು ಸಂಸದರಾದ ಬಳಿಕ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಚೇತರಿಸಿಕೊಂಡಿದ್ದು, ಅವರ ಅನುಭವದ ಆಧಾರದಲ್ಲಿ ಈ ಬಾರಿ ಚುನಾವಣೆ ಎದುರಿಸಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಗೆಲ್ಲೋಣ ಯಾವುದೇ ಗೊಂದಲ ಮಾಡಿಕೊಳ್ಳುವುದು ಬೇಡ ಎಂದರು.

ಇನ್ನೂ ಸಂಸದ ವಿ.ಶ್ರೀನಿವಾಸಪ್ರಸಾದ್, ಶಾಸಕರಾದ ಎನ್.ಮಹೇಶ್, ನಿರಂಜನಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಮುಖಂಡರುಗಳಾದ ರಾಮಚಂದ್ರು ಕಾರ್ಯಕಾರಿಣಿಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: BJP ಕಾರ್ಯಕಾರಿಣಿ: ಶಾಸಕತ್ವ ಹಾಗೂ ಉದ್ಯಮದ ಒತ್ತಡದಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರವಿಂದ್​​ ಬೆಲ್ಲದ್ ರಾಜೀನಾಮೆ?

Last Updated : Nov 15, 2022, 4:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.