ETV Bharat / state

ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತ ಬಿಜೆಪಿ ಮುಖಂಡರು; ಶಿಷ್ಟಾಚಾರ ಉಲ್ಲಂಘನೆ - etv bharat karnataka

ಚಾಮರಾಜನಗರದಲ್ಲಿ ನಡೆದ ಸಿಎಂ ಬೊಮ್ಮಾಯಿ ಭಾಗವಹಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಶಿಷ್ಟಾಚಾರ ಉಲ್ಲಂಘಿಸಿದ್ದು ಕಂಡುಬಂತು.

BJP leaders who violated etiquette
ಶಿಷ್ಟಾಚಾರ ಉಲ್ಲಂಘಿಸಿದ ಬಿಜೆಪಿ ಮುಖಂಡರು
author img

By

Published : Dec 13, 2022, 4:22 PM IST

ಚಾಮರಾಜನಗರ: ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದ ಕಾರ್ಯಕ್ರಮದ ವೇದಿಕೆಯ ಮೇಲೆ ಬಿಜೆಪಿ ಮುಖಂಡರು ಕುಳಿತು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳಷ್ಟೇ ವೇದಿಕೆಯಲ್ಲಿರುವುದು ಕ್ರಮ. ಆದರೆ, ಬಿಜೆಪಿ ಮುಖಂಡರಾದ ಮಾಜಿ ಶಾಸಕ ಪ್ರೊ.ಮಲ್ಲಿಕಾರ್ಜುನಪ್ಪ, ಅಮ್ಮನಪುರ ಮಲ್ಲೇಶ್ ಸಿಎಂ ಸಾಲಿನ ಕುರ್ಚಿಗಳಲ್ಲಿ ಆಸೀನರಾಗಿದ್ದು, ಹಿಂಬದಿ ಕುರ್ಚಿಗಳಲ್ಲಿ ಸಚಿವ ಸೋಮಣ್ಣ ಬೆಂಬಲಿಗರಿದ್ದರು. ಇದನ್ನು ಗಮನಿಸಿದ ಪೊಲೀಸರು, ಅಧಿಕಾರಿಗಳು ಮೌನವಹಿಸಿದ್ದರು.

ಬಿಎಸ್​ವೈ ಅಭಿಮಾನಿಗಳ ಆಕ್ರೋಶ: ಕಾರ್ಯಕ್ರಮದ ವೇದಿಕೆಯಲ್ಲಿ ಅಳವಡಿಸಿದ್ದ ಎಲ್​ಸಿಡಿ ಪರದೆಯಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಫೋಟೋ ಇಲ್ಲದೇ ಇರುವುದಕ್ಕೆ ಕುಪಿತಗೊಂಡ ಅಭಿಮಾನಿಗಳು ಫೋಟೋ ಹಾಕುವಂತೆ ಒತ್ತಾಯಿಸಿದರು. ಇದರಿಂದ ಕೆಲಹೊತ್ತು ಗೊಂದಲ ಉಂಟಾಯಿತು. ಈ ವೇಳೆ ಗುಂಡ್ಲುಪೇಟೆ ಶಾಸಕ ಸಿ ಎಸ್ ನಿರಂಜನ ಕುಮಾರ್ ವೇದಿಕೆಯೇರಿ ಇದು ಸರ್ಕಾರದ ಕಾರ್ಯಕ್ರಮವಾದ್ದರಿಂದ ಯಡಿಯೂರಪ್ಪರ ಫೋಟೋಗಳನ್ನು ಹಾಕಿಲ್ಲ. ಅವರ ಬಗ್ಗೆ ಅಪಾರ ಗೌರವ-ಪ್ರೀತಿ ಇದೆ ಎಂದರು. ನಂತರ ಬಿಎಸ್​ವೈ ಅಭಿಮಾನಿಗಳು ಸಮಾಧಾನವಾದರು.

ಇದನ್ನೂ ಓದಿ: ಅಪ್ಪ- ಮಗ ಇಬ್ಬರೂ ಚಾಮರಾಜನಗರಕ್ಕೆ ಭೇಟಿ: ಮೌಢ್ಯಕ್ಕೆ ಸಡ್ಡು ಹೊಡೆದ ಬಿಜೆಪಿ 2ನೇ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.