ETV Bharat / state

ವಿ.ಸೋಮಣ್ಣರ ಮುನಿಸಿಗೆ ಮುಲಾಮು: ಚಾಮರಾಜನಗರ ಸಾರಥ್ಯ ಕೊಟ್ಟ ಬಿಜೆಪಿ ಹೈಕಮಾಂಡ್ - v somanna

ವಸತಿ ಸಚಿವ ವಿ.ಸೋಮಣ್ಣ ಮುನಿಸಿಗೆ ಮುಲಾಮು ಹಚ್ಚುವ ಉದ್ದೇಶದಿಂದ ಬಿಜೆಪಿ ಹೈಕಮಾಂಡ್​ ಚಾಮರಾಜನಗರದ ಸಾರಥ್ಯ ವಹಿಸಿಕೊಡಲು ಮುಂದಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ವಿ ಸೋಮಣ್ಣ
v somanna
author img

By

Published : Mar 16, 2023, 9:34 AM IST

ಚಾಮರಾಜನಗರ: ಹಳೇ ಮೈಸೂರು ಪ್ರಾಂತ್ಯದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈ ಬಾರಿ ಶತಾಯ ಗತಾಯ ಹೆಚ್ಚಿನ ಸ್ಥಾನ ಗೆಲ್ಲಲೇ ಬೇಕೆಂದು ಸರ್ಕಸ್ ಮಾಡುತ್ತಿದೆ. ಆದರೆ, ಇದುವರೆಗೂ ಮಾಡಿದ ತಂತ್ರಗಳು ಕೈ ಹಿಡಿಯುತ್ತಿಲ್ಲ. ಹೀಗಾಗಿ, ಇಲ್ಲಿನ ಸಾರಥ್ಯ ವಹಿಸಿಕೊಳ್ಳಲು ಯಾವ ನಾಯಕರೂ ಮುಂದೆ ಬರುತ್ತಿಲ್ಲ. ಇದೀಗ ಬಿಜೆಪಿಯೊಂದಿಗಿನ ವಸತಿ ಸಚಿವ ವಿ. ಸೋಮಣ್ಣ ಮುನಿಸು ಶಮನವಾಗಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲಿ ಅದರಲ್ಲೂ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಉಸ್ತುವಾರಿ ನೀಡಲು ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ.

ಬಿಜೆಪಿ ಉನ್ನತ ಮೂಲಗಳ ಪ್ರಕಾರ, ಸೋಮಣ್ಣರ ಮುನಿಸಿಗೆ ಸಾರಥ್ಯ ವಹಿಸಿಕೊಡುವ ಮುಲಾಮು ಹಚ್ಚಿದೆ ಎಂಬ ಮಾತುಗಳು ಕೇಳಿಬಂದಿದೆ. ನಾಲ್ಕು ದಶಕಗಳ ತಮ್ಮ ಸುದೀರ್ಘ ರಾಜಕಾರಣದಲ್ಲಿ ಚಾಮರಾಜನಗರ ಜಿಲ್ಲೆಯೊಂದಿಗೆ ಎರಡು ದಶಕಗಳಿಂದ ಒಡನಾಟ ಹೊಂದಿರುವ ಸೋಮಣ್ಣ, ಎರಡು ಬಾರಿ ಚಾಮರಾಜನಗರ, ಒಮ್ಮೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದಲ್ಲಿ ಸಹ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದು, ಈ ಹಿಂದೆ ಚಾಮುಂಡೇಶ್ವರಿ ಹಾಗೂ ನಂಜನಗೂಡು ಉಪ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಈ ಭಾಗದ ಚುನಾವಣಾ ಸಾರಥ್ಯ ಮಾತ್ರ ವಹಿಸಿಕೊಂಡಿರಲಿಲ್ಲ.

ಇದನ್ನೂ ಓದಿ: 'ನಾನು ನಿಂತ ನೀರಲ್ಲ, ಹರಿಯುವ ನೀರು': ಸಚಿವ ಸೋಮಣ್ಣ ಹೀಗಂದಿದ್ದೇಕೆ?

ಬಿಜೆಪಿ ಅಲೆ ಇದ್ದ ಕಾಲದಲ್ಲೂ ಈ ಭಾಗದಲ್ಲಿ ನಾಯಕತ್ವದ ಕೊರತೆಯಿಂದಾಗಿ ಒಂದು - ಎರಡು ಸ್ಥಾನಕ್ಕಷ್ಟೇ ಭಾರತೀಯ ಜನತಾ ಪಾರ್ಟಿ ತೃಪ್ತಿಪಟ್ಟುಕೊಳ್ಳುತ್ತಿದೆ. ವಿಧಾನಸಭಾ ವಿರೋಧ ಪಕ್ಷದ ನಾಯಕ ಹಾಗು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಬಲ್ಯವಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲೇಬೇಕು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿ, ಉಸ್ತುವಾರಿ ಸಚಿವರಾಗಿ ಅನುಭವ ಹೊಂದಿರುವ ವಿ. ಸೋಮಣ್ಣ ಅವರಿಗೆ ಸಾರಥ್ಯ ನೀಡಲು ಅಳೆದು ತೂಗಿ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಗಂಟಲಿನಿಂದ ಮಾತಾಡ್ತಾರೆ, ಹೃದಯದಿಂದಲ್ಲ: ಸಚಿವ ವಿ.ಸೋಮಣ್ಣ

ಇದರೊಟ್ಟಿಗೆ, ಸೋಮಣ್ಣಗೆ ಹಿಡಿತವಿರುವ ಚಾಮರಾಜನಗರ ಭಾಗದಲ್ಲಿ ಸಾರಥ್ಯ ಕೊಟ್ಟಂತೆಯೂ ಆಗಲಿದೆ ಜೊತೆಗೆ, ಪಕ್ಷದಲ್ಲಿನ ವಿವಿಧ ಬೆಳವಣಿಗೆಗಳಿಂದ ಅಸಮಾಧಾನಗೊಂಡಿದ್ದ ಅವರಿಗೆ ಮುಲಾಮು ಹಚ್ಚಿದಂತೆಯೂ ಆಗಲಿದೆ ಎಂಬ ಲೆಕ್ಕಾಚಾರ ಇದರಲ್ಲಿದೆ. ಜಿಲ್ಲೆಯ ಮೇಲೆ ಹಿಡಿತ ಹಾಗೂ ಅಭಿಮಾನ ಇಟ್ಟುಕೊಂಡಿರುವ ಸೋಮಣ್ಣ ಅವರಿಗೆ ಈ ಭಾಗದ ಸಾರಥ್ಯ ಕೊಟ್ಟರೆ ಬಿಜೆಪಿಗೆ ಪ್ಲಸ್ ಪಾಯಿಂಟ್ ಎಂಬ ಮಾತುಗಳು ರಾಜಕೀಯ ವಿಶ್ಲೇಷಕರದ್ದು.

ಇದನ್ನೂ ಓದಿ: ಎಲ್ಲರಿಗೂ ಮಕ್ಕಳು ಇರ್ತಾರೆ.. ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲವೆಂದರೆ ನನಗೂ ಬೇಡ : ವಿ ಸೋಮಣ್ಣ

ನಾವೆಲ್ಲಾದರೂ ಕಾಂಗ್ರೆಸ್​ಗೆ ಹೋಗುತ್ತೇನೆ ಅಂತ ಹೇಳಿದ್ದೇನಾ?: ಸಚಿವ ವಿ ಸೋಮಣ್ಣ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.