ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪಕ್ಷಿಗಳ ಗಣತಿ ಕಾರ್ಯ ಇಂದಿನಿಂದ ಆರಂಭವಾಗಿದ್ದು, 77 ಮಂದಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಂಡೀಪುರ ವ್ಯಾಪ್ತಿಯ ಹೆಡಿಯಾಲ ಉಪ ವಿಭಾಗ- 50, ಗುಂಡ್ಲುಪೇಟೆ ಉಪ ವಿಭಾಗ- 14, ಬಂಡೀಪುರ ಉಪ ವಿಭಾಗದಲ್ಲಿ- 13 ಮಂದಿ ಸೇರಿದಂತೆ ಒಟ್ಟು 77 ಜನರು ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ.
ಕ್ಯಾಮರಾ, ಬೈನಾಕುಲರ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಶುಕ್ರವಾರದಿಂದ ಭಾನುವಾರದ ವರೆಗೆ ಮೂರು ದಿನಗಳ ಕಾಲ ಪಕ್ಷಿಗಳ ಗಣತಿ ಕಾರ್ಯ ನಡೆಯಲಿದ್ದು, ಆಯಾಯ ವಿಭಾಗದಲ್ಲಿ ಗಣತಿ ಕಾರ್ಯದಲ್ಲಿ ಭಾಗಿಯಾಗಿರುವವರು ವರದಿಯನ್ನು ಅಲ್ಲಿನ ಆರ್ಎಫ್ಓಗಳಿಗೆ ಪಿಪಿಟಿ ಮೂಲಕ ಸಲ್ಲಿಸಬೇಕು. ಅತ್ಯುತ್ತಮ ಹಾಗೂ ವಿಭಿನ್ನ ಶೈಲಿಯಲ್ಲಿ ಪಕ್ಷಿಗಳ ಪೋಟೋ ಕ್ಲಿಕ್ಕಿಸಿದರೆ ಅಂತವರನ್ನು ಗುರುತಿಸಿ ಬಹುಮಾನ ನೀಡಲಾಗುವುದು. ಪ್ರಥಮ, ದ್ವಿತೀಯ, ತೃತೀಯ ಎಂದು ಮೂರು ಬಹುಮಾನ ಇರಲಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ತಿಳಿಸಿದ್ದಾರೆ.
ಈ ಹಿಂದೆ ನಾಗರಹೊಳೆ ಪಕ್ಷಿಗಳ ಗಣತಿ ಕಾರ್ಯ ನಡೆಸಲಾಗಿತ್ತು. ಇದೀಗ ಬಂಡೀಪುರದಲ್ಲಿ ಮಾಡಲಾಗುತ್ತಿದೆ. ಕಳೆದ 20 ವರ್ಷದ ಹಿಂದೆ ಬಂಡೀಪುರಲ್ಲಿ ಪಕ್ಷಿಗಳ ಗಣತಿ ನಡೆದಿತ್ತು. ಆ ನಂತರ ಈಗ ಗಣತಿ ನಡೆಯುತ್ತಿರುವುದು ಪಕ್ಷಿ ಪ್ರೇಮಿಗಳ ಫುಳಕ ಹೆಚ್ಚುವಂತೆ ಮಾಡಿದೆ.
ಇದನ್ನು ಓದಿ:ಭಾನುವಾರ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ... ಚಾ.ನಗರದಲ್ಲಿ ಸಕಲ ಸಿದ್ಧತೆ