ಕೊಳ್ಳೇಗಾಲ: ಟೀ ಕುಡಿಯಲು ಬಂದವನಿಂದಲ್ಲೇ ಟೀ ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಈ ಸಂಬಂಧ ಬೈಕ್ ಮಾಲೀಕ ದೂರು ದಾಖಲಿಸಿದ್ದಾರೆ. ತಾಲೂಕಿನ ಪಾಳ್ಯ ಗ್ರಾಮದ ಕುಮಾರ್ ತನ್ನ ಹೋಂಡಾ ಡಿಯೋ ಬೈಕ್ ಕಳೆದುಕೊಂಡ ವ್ಯಕ್ತಿ. ಮುಳ್ಳೂರು ಗ್ರಾಮದ ವಿನೋದ್ ಎಂಬುವವನ ಬೈಕ್ ಕಳವು ಮಾಡಿ ಪರಾರಿಯಾಗಿರುವ ಆರೋಪಿ.
ಕೃಷ್ಣ ಬೈಕ್ ಕಳುವಿನ ವಿಚಾರವನ್ನು ಮಾಲೀಕನಿಗೆ ಹೇಳಿದ ತಕ್ಷಣ ಆರೋಪಿ ವಿನೋದ್ ಪತ್ತೆಗೆ ಅವನ ಗ್ರಾಮಕ್ಕೆ ತೆರಳಿದ್ದಾನೆ. ಆದರೆ, ಎಷ್ಟು ಹುಡುಕಿದರೂ ಪತ್ತೆಯಾಗದ ಕಾರಣ ತಡವಾಗಿ ಕುಮಾರ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಪತ್ತೆಗೆ ಮುಂದಾಗಿದ್ದಾರೆ.