ಕೊಳ್ಳೇಗಾಲ (ಚಾಮರಾಜನಗರ): ಲಾಕ್ಡೌನ್ ಸಡಿಲಿಕೆಯಾದ ಬೆನ್ನಲ್ಲೇ ವಾಹನಗಳು ರಸ್ತೆಗಿಳಿದಿವೆ. ಇದರಿಂದ ಪಟ್ಟಣದ ಸುತ್ತ ಮುತ್ತ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ತಡರಾತ್ರಿ ಬೈಕ್ವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಿರುಸೇತುವೆಯ ತಡೆಗೋಡೆಗೆ ಗುದ್ದಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ ಭೀಮನಗರ ನಿವಾಸಿ ನಿಖಿಲ್ (23) ಮೃತ ಯುವಕ. ಈತ ಕರ್ತವ್ಯಕ್ಕೆ ಹಾಜರಾಗಲು ಸಂತೆಮರಳ್ಳಿ ಕುದೇರ್ ಹಾಲಿನ ಡೈರಿಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವೇಗವಾಗಿ ಬೈಕ್ ಚಲಾಯಿಸಿದ ಪರಿಣಾಮ ಆಯ ತಪ್ಪಿ ರಸ್ತೆ ಬದಿಯ ಕಿರುಸೇತುವೆಯ ತಡೆಗೋಡೆಗೆ ಗುದ್ದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಈ ಸಂಬಂಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿರುವುದರಿಂದ ಯುವಕರು ವೇಗವಾಗಿ ಬೈಕ್ ಚಾಲನೆ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಲಾಕ್ಡೌನ್ ಸಡಿಲವಾದ ದಿನದಿಂದ ಇದುವರೆಗೂ 4-5 ಅಪಘಾತ ಪ್ರಕರಣಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.