ETV Bharat / state

ಇಂದಿನಿಂದ ಭರಚುಕ್ಕಿ ವೀಕ್ಷಣೆ ಅವಕಾಶ: ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದೌಡು - ಭರಚುಕ್ಕಿ ವೀಕ್ಷಣೆ ಅವಕಾಶ

ಜಿಲ್ಲಾಡಳಿತ ಕೋವಿಡ್-19 ಹಿನ್ನಲೆ ವಿವಿಧ ಮುನ್ನೆಚ್ಚರಿಗೆ ಕ್ರಮಗಳೊಂದಿಗೆ ಶುಕ್ರವಾರದಿಂದ ಪ್ರಸಿದ್ಧಿ ಭರಚುಕ್ಕಿ ವೀಕ್ಷಣೆಗೆ ಅನುವುಮಾಡಿದೆ. ಹಾಲ್ನೊರೆಯಂತೆ ಧುಮ್ಮಿಕಿ ಕಾವೇರಿ ಸೊಬಗು ನೋಡಿ ಪ್ರವಾಸಿಗರು ಫಿದಾ ಆಗಿದ್ದಾರೆ.

Barachukki
ಭರಚುಕ್ಕಿ ವೀಕ್ಷಣೆ ಅವಕಾಶ
author img

By

Published : Aug 14, 2020, 8:32 PM IST

Updated : Aug 15, 2020, 8:13 AM IST

ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಸಮೀಪದಲ್ಲಿರುವ ಭರಚುಕ್ಕಿ ಜಲಪಾತ ವೀಕ್ಷಣೆಗೆ ಇಂದಿನಿಂದ ಅನುವು ಮಾಡಿಕೊಡಲಾಗಿದೆ. ಅವಕಾಶದ ಬೆನ್ನಲ್ಲೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದು, ಹಾಲಿನ ನೊರೆಯಂತೆ ದುಮ್ಮಿಕ್ಕುತ್ತಿರುವ ಭರಚುಕ್ಕಿ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ.

ಹಸಿರು ಬೆಟ್ಟದ ಮಧ್ಯ ನುಸುಳಿ ಬರುತ್ತಿರುವ ಹಾಲಿನಂತೆ ನೋಡುಗರ ಕಣ್ಮನ ಸೆಳೆಯುತ್ತಿರುವ ಭರಚುಕ್ಕಿ. ಮಳೆಗಾಲದಲ್ಲಿ ಪ್ರವಾಸಿಗಾರ ನೆಚ್ಚಿನ ತಾಣವಾಗಿದೆ. ಸುತ್ತಲೂ ಹಸಿರು ಬೆಟ್ಟದ ಸಾಲು ತಂಪಾದ ವಾತವರಣವನ್ನು ನೋಡಿದ ಪರಿಸರ ಪ್ರೇಮಿಗಳಿಗೆ ಸ್ವರ್ಗದ ಅನುಭವವಾಗಿದೆ.

Barachukki
ಭರಚುಕ್ಕಿ ವೀಕ್ಷಣೆ ಅವಕಾಶ

ಮಾಸ್ಕ್, ಥರ್ಮಲ್ ಸ್ಕ್ರೀನ್ ಖಡ್ಡಾಯ: ಕೊವೀಡ್ 19 ನಿಂದಾಗಿ ಪ್ರವಾಸಿಗರ ಸುರಕ್ಷತೆಯಿಂದ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರವೇಶ ದ್ವಾರದಲ್ಲೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜಲಪಾತದ ಆವರಣದಲ್ಲಿ ಕೈ ಗಳನ್ನು ಸಾನಿಟೈಸ್ ಮಾಡಿಕೊಳ್ಳಲು ವ್ಯವಸ್ಥೆಯಿದ್ದು, ಶೌಚಾಲಯದ ವ್ಯವಸ್ಥೆ, ವಾಹನಗಳಿವೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈಟಿವಿ ಭಾರತ ದೊಂದಿಗೆ ಸಂತಸ ಹಂಚಿಕೊಂಡ ಕಾವ್ಯ, ಜಲಪಾತ ವೀಕ್ಷಣೆಯಿಂದ ಮನಸ್ಸಿಗೆ ಚೈತನ್ಯ ದೊರಕಿದೆ. ಕೊರೊನಾ ಭಯದಲ್ಲಿ ಬೇಸತ್ತಿದ್ದ ನಮಗೆ ಹೊಸ ಅನುಭವವಾಗಿದೆ. ಭಯ ಬಿಟ್ಟು ವಿವಿಧ ಮುನ್ನೆಚ್ಚರಿಕೆ ಕ್ರಮ ಪಾಲಿಸಿ ಪ್ರತಿಯೊಬ್ಬರು ಮನರಂಜನೆ ಪಡೆದುಕೊಳ್ಳಿ ಎಂದಿದ್ದಾರೆ.

ಇಂದಿನಿಂದ ಭರಚುಕ್ಕಿ ವೀಕ್ಷಣೆ ಅವಕಾಶ

ಸೋಮಶೇಕರ್ ಮಾತನಾಡಿ, ಉತ್ತಮ ಮಳೆಯಾಗಿರುವುದ್ದರಿಂದ ಭರಚುಕ್ಕಿ ಜಲಪಾತ ವೈಭವ ಅದ್ಭುತವಾಗಿ ಗೋಚರಿಸಿದೆ. ಸೃಷ್ಟಿ ಕರ್ತ ನಮಗಾಗಿ ನೀಡಿರುವ ಈ ತಾಣಕ್ಕೆ ಭೇಟಿ ನೀಡಿ ಖುಷಿಯಾಗಿದೆ. ಸಾರ್ವಜನಿಕರಿಗೆ ಮೂಲ ಸೌಕರ್ಯಗಳ ವ್ಯವಸ್ಥೆ ಚೆನ್ನಾಗಿದ್ದು. ಅರಣ್ಯ ಇಲಾಖೆ ಸಿಬ್ಬಂದಿ ಪರಿಸರ ಪ್ರೇಮಿಗಳಿಗೆ ಸರಿಯಾಗಿ ಸ್ಪಂದಿಸುತ್ತಾರೆ ಎಂದಿದ್ದಾರೆ.

ಹರೀಶ್ ಮಾತನಾಡಿ ಕೊರೊನಾದಿಂದ 5 ತಿಂಗಳು ಮನೆಯವಾಸವಾಗಿತ್ತು. ಎಷ್ಟೋ ದಿನದ ಮೇಲೆ ಲಾಂಗ್ ಡ್ರೈವ್ ಅನುಭವ ಪಡೆದಿದ್ದು ಸಂತಸ ತಂದಿದೆ. ಮಾಸ್ಕ್ ಹಾಗೂ ವಿವಿಧ ಸುರಕ್ಷತೆ ಕ್ರಮ ಅನುಸರಿಸಿ ಜಲಪಾತವನ್ನು ಎಲ್ಲರೂ ವೀಕ್ಷಣೆ ಮಾಡಿ ಎಂದಿದ್ದಾರೆ.

Barachukki
ಭರಚುಕ್ಕಿ ವೀಕ್ಷಣೆ ಅವಕಾಶ

ಆರ್​ಎಫ್​ಓ ಪ್ರವೀಣ್ ಚಲವಾದಿ ಮಾತನಾಡಿ, ಪ್ರವಾಸಿಗರಿಗೆ ಬೇಕಾದ ಮೂಲ ಸೌಕರ್ಯ ಮತ್ತು ಕೋವಿಡ್ 19 ಮುನ್ನೆಚ್ಚರಿಕೆ ಸುರಕ್ಷತೆಯನ್ನು ಪಾಲಿಸಿದ್ದೇವೆ. ಸಾವಿರಾರು ‌ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ‌ ಎಂದರು.

Last Updated : Aug 15, 2020, 8:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.