ಚಾಮರಾಜನಗರ: ಹುಲಿ ಮತ್ತು ಆನೆಗಳದ್ದು ಯಾವಾಗಲೂ ಉತ್ತರ-ದಕ್ಷಿಣ ಸಂಬಂಧ ಆದ್ರೆ, ಬಂಡೀಪುರದ ಕೆಕ್ಕೆನಹಳ್ಳ ಸಮೀಪ ಮರದ ಮೇಲೆ ಹುಲಿ ರಿಲ್ಯಾಕ್ಸ್ ಮೂಡಿನಲ್ಲಿ ಮಲಗಿದ್ದರೆ ಕೆಳಗೆ ಗಜಪಡೆ ಸಖತ್ ಜೋಶ್ನಲ್ಲಿರುವ ವಿಡಿಯೋವೊಂದು ವೈರಲ್ ಆಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಕ್ಕೆನಹಳ್ಳದಲ್ಲಿ ವ್ಯಾಘ್ರನ ವಿಶ್ರಾಂತಿಗೆ ಗಜಪಡೆ ಸಾಕ್ಷಿಯಾಗಿರುವ ದೃಶ್ಯ ರೋಮಾಂಚನಕಾರಿಯಾಗಿದೆ.
ಬಿದ್ದಿರುವ ಮರದ ರೆಂಬೆ ಮೇಲೆ ಹುಲಿರಾಯ ವಿಶ್ರಾಂತಿ ಪಡೆಯುತ್ತಿರುವುದು ಮತ್ತು ಗಜಪಡೆಗಳು ಕೆಳಗಿರುವ ಅಪರೂಪದ ದೃಶ್ಯವನ್ನು ಪ್ರವಾಸಿಗರೊಬ್ಬರು ಸೆರೆಹಿಡಿದಿದ್ದಾರೆ.