ಚಾಮರಾಜನಗರ: ಕನ್ನಡ ಚಿತ್ರರಂಗ, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಚಿತ್ರೀಕರಣವು ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಕಲ್ಲು ಕ್ವಾರಿಗಳಲ್ಲಿ ನಡೆಯುತ್ತಿದೆ.
ಚಿತ್ರದ ನಾಯಕ ಅಭಿಷೇಕ್ ಅಂಬರೀಶ್, ಡೈರೆಕ್ಟರ್ ದುನಿಯಾ ಸೂರಿ ಸೇರಿದಂತೆ ಚಿತ್ರತಂಡ ಚಾಮರಾಜನಗರದಲ್ಲಿ ವಾಸ್ತವ್ಯ ಹೂಡಿದೆ.

ಇದನ್ನೂ ಓದಿ: ಸೆಲೆಬ್ರೇಷನ್ಸ್ ಟೀ ರಾಯಭಾರಿಯಾಗಿ ಗಾಯಕ ವಿಜಯ್ ಪ್ರಕಾಶ್: ಅಪ್ಪುವಿಗೆ ನಮನ
ನೂರಾರು ಅಡಿ ಆಳದ ಗಣಿಗಾರಿಕೆ ಸ್ಥಳಗಳಲ್ಲಿ ಬೈಕ್ಗಳು, ಜೀಪ್ಗಳಲ್ಲಿ ಫೈಟರ್ಗಳು ಬರುವುದು, ಚೇಸಿಂಗ್ ಸೇರಿದಂತೆ ರೋಮಾಂಚಕ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿಯಲಾಗುತ್ತಿದೆ.