ಚಾಮರಾಜನಗರ: ತಾಯಿಯಿಂದ ತಪ್ಪಿಸಿಕೊಂಡ ಮರಿ ಆನೆಯೊಂದು ಶಾಲೆಗೆ ಬಂದು ಮಕ್ಕಳೊಟ್ಟಿಗೆ ಆಟವಾಡಿರುವ ಅಪರೂಪದ ಘಟನೆ ಯಳಂದೂರು ತಾಲೂಕಿನ ಪುರಾಣಿಪೋಡಿನ ವಸತಿ ಶಾಲೆಯಲ್ಲಿ ಭಾನುವಾರ ನಡೆಯಿತು. ಬಿಳಿಗಿರಿರಂಗನ ಬೆಟ್ಟ ಅರಣ್ಯ ಪ್ರದೇಶದಲ್ಲಿ ಅಮ್ಮನಿಂದ ಬೇರ್ಪಟ್ಟ ಗಂಡು ಮರಿಯಾನೆ ಪುರಾಣಿಪೋಡಿನ ವಸತಿ ಶಾಲೆ ಆವರಣದಲ್ಲಿ ಕಾಣಿಸಿಕೊಂಡಿದೆ.
ಆನೆ ಕಂಡದ್ದೇ ತಡ ಶಾಲಾ ಮಕ್ಕಳಂತೂ ಫುಲ್ ಖುಷ್!. ಮಕ್ಕಳು ಆಡಿ ನಲಿದಾಡಿದರು. ಮನುಷ್ಯರನ್ನೇ ಕಾಣದ ಮರಿಯಾನೆಯೂ ಕೂಡಾ ಹೊಸ ಸ್ನೇಹಿತರೊಟ್ಟಿಗೆ ಸಮಯ ಕಳೆದು ಕೊಟ್ಟ ಹಾಲು ಕುಡಿದು ಸಂಭ್ರಮಿಸಿತು. ಮಕ್ಕಳಂತೂ ಬಾಳೆಹಣ್ಣು ತಿನ್ನಿಸಿ 'ಆನೆ ಬಂತೊಂದಾನೆ, ಯಾವೂರಾನೆ' ಎಂದು ಹಾಡಿ ಮರಿಯೊಟ್ಟಿಗೆ ಖುಷಿಪಟ್ಟರು.
![ದಾರಿ ತಪ್ಪಿ ಶಾಲೆಗೆ ಬಂತೊಂದು ಮರಿಯಾನೆ](https://etvbharatimages.akamaized.net/etvbharat/prod-images/16287213_elephnata.jpg)
ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಯಳಂದೂರು ವಲಯದ ಸಿಬ್ಬಂದಿ ಗಸ್ತು ತಿರುಗಿ ತಾಯಿ ಆನೆ ಘೀಳಿಡುತ್ತಿದ್ದುದನ್ನು ಗಮನಿಸಿದ್ದಾರೆ. ನಂತರ ಅವರು, ಈರಣ್ಣಕಟ್ಟೆ ಪೋಡಿನ ಬಳಿ ಈ ಮರಿಯಾನೆ ತಾಯಿಯನ್ನು ಸೇರುವಂತೆ ಮಾಡಿದರು.
![ದಾರಿ ತಪ್ಪಿ ಶಾಲೆಗೆ ಬಂತೊಂದು ಮರಿಯಾನೆ](https://etvbharatimages.akamaized.net/etvbharat/prod-images/16287213_elephnat.jpg)
ಇದನ್ನೂ ಓದಿ: ಇಸ್ಕಾನ್ ದೇವಸ್ಥಾನದಲ್ಲಿ ರಾಧಾ ಕೃಷ್ಣಚಂದ್ರರಿಗೆ ಛಪ್ಪನ್ ಭೋಗ್ ಸಮರ್ಪಣೆ