ಚಾಮರಾಜನಗರ: ಕೊರೊನಾ ಲಾಕ್ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡು ಅಕ್ರಮ ಮದ್ಯ ಮಾರಾಟಕ್ಕೆ ಮುಂದಾಗಿದ್ದ 10 ಮಂದಿಯನ್ನು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಒರ್ವನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಮಾದಪುರ ಗ್ರಾಮದ ನಾಗಣ್ಣ, ನಂಜದೇವನಪುರ ಗ್ರಾಮದ ಕುಮಾರ, ಬೆಂಡರವಾಡಿ ಗ್ರಾಮದ ಸತೀಶ್, ದೊಡ್ಡರಾಯಪೇಟೆಯ ಲಿಂಗರಾಜು, ಚಾಟಿಪುರ ಗ್ರಾಮದ ಮಗದೇವಯ್ಯ, ಶಕ್ತಿವೇಲು, ಕಸ್ತೂರು ಗ್ರಾಮದ ಪರಶಿವಮೂರ್ತಿ, ಹೆಗ್ಗವಾಡಿ ಗ್ರಾಮದ ಶ್ರೀನಿವಾಸಪ್ರಸಾದ್, ಭೋಗಾಪುರ ಗ್ರಾಮದ ಸುರೇಶ್ ಸೇರಿದಂತೆ 10 ಮಂದಿಯನ್ನು ಚಾ.ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ರಂಗನಾಥಪುರ ಗ್ರಾಮದ ಮಂಜು ಎಂಬಾತನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 100ಕ್ಕೂ ಹೆಚ್ಚು ಲೀ. ಮದ್ಯ ವಶಪಡಿಸಿಕೊಂಡಿದ್ದು, 7 ಬೈಕ್ ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.