ಚಾಮರಾಜನಗರ : ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಕ್ರಮ ಜೂಜಾಟದಲ್ಲಿ ತೊಡಗಿ ಮೂರು ದಿನಗಳ ಹಿಂದೆ ಸಿಕ್ಕಿಬಿದ್ದಿದ್ದ ಇಬ್ಬರು ಪೊಲೀಸರು ಸೇರಿದಂತೆ ಮೂವರು ಸರ್ಕಾರಿ ನೌಕರರನ್ನು ಡಿಸಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮೀಸಲು ಪಡೆಯ ಎಎಸ್ಐ ಪ್ರದೀಪ್, ಹೆಡ್ ಕಾನ್ಸ್‌ಟೇಬಲ್ ಮರಿಸ್ವಾಮಿ, ಚಾಮರಾಜನಗರ ತಹಶೀಲ್ದಾರ್ ಚಾಲಕ ಕಮಲೇಶ್ ಅಮಾನತುಗೊಂಡ ಸರ್ಕಾರಿ ಸಿಬ್ಬಂದಿ.
ಈ ಮೂವರು ಡಿಸೆಂಬರ್ 21ರಂದು ಚಾಮರಾಜನಗರದ ಕರಿನಂಜಪುರದಲ್ಲಿ ಅಕ್ರಮ ಜೂಜಾಟ ಸಂಬಂಧ ಪೊಲೀಸರು ದಾಳಿ ನಡೆಸಿದ ವೇಳೆ 17 ಮಂದಿ ಜನರೊಟ್ಟಿಗೆ ಇವರು ಸಿಕ್ಕಿಬಿದ್ದಿದ್ದರು.
ಪೊಲೀಸರನ್ನು ಅಮಾನತುಗೊಳಿಸಿದ್ದರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಚಾಲಕನನ್ನು ಸಸ್ಪೆಂಡ್ ಮಾಡಿದ್ದರ ಕುರಿತು ಚಾಮರಾಜನಗರ ತಹಶೀಲ್ದಾರ್ ಈಟಿವಿ ಭಾರತಕ್ಕೆ ಖಚಿತಪಡಿಸಿದ್ದಾರೆ.
ಇದನ್ನೂ ಓದಿ:ಚಾಮರಾಜನಗರ: ಜೂಜಾಡುತ್ತಿದ್ದ ಎಎಸ್ಐ, ಕಾನ್ಸ್‌ಟೇಬಲ್, ತಹಶೀಲ್ದಾರ್ ಚಾಲಕ ಅರೆಸ್ಟ್