ಕೊಳ್ಳೇಗಾಲ: ವಿವಾಹೇತರ ಸಂಬಂಧ ನೋಡಿದ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಇಂದಿರಾ ಕಾಲೋನಿ ನಿವಾಸಿಗಳಾದ ಸತ್ಯರಾಜು ಹಾಗೂ ಯುವತಿ ಬಂಧಿತರು. ಶೋಭರಾಜು ಎಂಬಾತ ಸತ್ಯರಾಜು ಮತ್ತು ಯುವತಿ ರಾಸಲೀಲೆಯಲ್ಲಿ ತೊಡಗಿದ್ದನ್ನು ನೋಡಿದ್ದನಂತೆ. ತಮ್ಮ ಅನೈತಿಕ ಸಂಬಂಧವನ್ನು ಬೇರೆಯವರಿಗೆ ಹೇಳುತ್ತಾನೆ ಎಂಬ ಭಯದಲ್ಲಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಸದ್ಯ, ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೋಳ್ಳೆಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.