ಚಾಮರಾಜನಗರ (ಗುಂಡ್ಲುಪೇಟೆ): ಅರಣ್ಯ ಇಲಾಖೆಯ ಬಫರ್ ಝೋನ್ ವ್ಯಾಪ್ತಿಯ ಪಾರ್ವತಿ ಬೆಟ್ಟದಲ್ಲಿ ಜಿಂಕೆಯನ್ನು ಬೇಟೆಯಾಡಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿ ಮಹೇಶ್ ಆಲಿಯಾಸ್ ಮುತ್ತಪ್ಪಿಯನ್ನು ಅರಣ್ಯಾಧಿಕಾರಿ ಡಾ. ಲೋಕೇಶ್ ಮತ್ತು ತಂಡ ಸೋಮವಾರ ಬಂಧಿಸಿದೆ. ಏಪ್ರಿಲ್ 28ರಂದು ಜಿಂಕೆಯನ್ನು ಬೇಟೆಯಾಡುವ ಸಂದರ್ಭದಲ್ಲಿ ದಾಳಿ ಮಾಡಿದ್ದರು. ಆದರೆ ಆ ವೇಳೆ ತಪ್ಪಿಸಿಕೊಂಡಿದ್ದ ಖದೀಮನನ್ನು ಖಚಿತ ಮಾಹಿತಿ ಮೇರೆಗೆ ಅಣ್ಣೂರು ಕೇರಿಯಲ್ಲಿ ಬಂಧಿಸಿದ್ದಾರೆ. ಬಳಿಕ ಆತನ ಬಳಿ ಇದ್ದ ನಾಡ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಎಸ್ಟಿಪಿಎಫ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.