ETV Bharat / state

ಪಾಠದೊಟ್ಟಿಗೆ ಬಿಲ್ವಿದ್ಯೆ, ಕತ್ತಿವರಸೆ: ಸಂತೇಮರಹಳ್ಳಿ ಏಕಲವ್ಯ ಶಾಲೆಯಲ್ಲಿ ಆಧುನಿಕ ಅರ್ಜುನರು - ಚಾಮರಾಜನಗರ ತಾಲೂಕಿ‌ನ ಸಂತೇಮರಹಳ್ಳಿ ಅರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿ ಶಾಲೆ

ಚಾಮರಾಜನಗರ ತಾಲೂಕಿ‌ನ ಸಂತೇಮರಹಳ್ಳಿಯಲ್ಲಿರುವ ರಾಜ್ಯದ ಏಕೈಕ ಅರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿ ಶಾಲೆಯಲ್ಲಿ 45 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದು, ರಾಜ್ಯ, ರಾಷ್ಟ್ರಮಟ್ಟದಲ್ಲಿ 'ಅರ್ಜುನ ಶಕ್ತಿ' ಪ್ರದರ್ಶಿಸುತ್ತಿದ್ದಾರೆ. ಪರಿಶಿಷ್ಟ ಪಂಗಡದ ಮಕ್ಕಳಿಗೆ ಮಾತ್ರ ಈ ಶಾಲೆ ಸೀಮಿತವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಯ 8 ರಿಂದ ಪದವಿ ವರೆಗಿನ ವಿದ್ಯಾರ್ಥಿಗಳು ಸಾಂಪ್ರದಾಯಿಕ ಕಲೆಯಲ್ಲಿ ಛಾಪು ಮೂಡಿಸುತ್ತಿದ್ದಾರೆ.

Archery and fencing training in Chamarajanagar
ಅರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿ ಶಾಲೆಯಲ್ಲಿ ಬಿಲ್ವಿದ್ಯೆ, ಕತ್ತಿವರಸೆ ತರಬೇತಿ
author img

By

Published : Dec 23, 2021, 1:19 PM IST

ಚಾಮರಾಜನಗರ: ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು ಈ ಶಾಲೆಗೆ ಸೇರ್ಪಡೆಗೊಂಡು ಪಾಠದೊಂದಿಗೆ ಆರ್ಚರಿ, ಫೆನ್ಸಿಂಗ್​​​ನಲ್ಲಿ ಪ್ರಾವೀಣ್ಯತೆ ಸಾಧಿಸುವ ಮೂಲಕ ಆಧುನಿಕ ಅರ್ಜುನರಾಗಿ ರೂಪುಗೊಳ್ಳುತ್ತಿದ್ದಾರೆ.

ಅರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿ ಶಾಲೆಯಲ್ಲಿ ಬಿಲ್ವಿದ್ಯೆ, ಕತ್ತಿವರಸೆ ತರಬೇತಿ

ಚಾಮರಾಜನಗರ ತಾಲೂಕಿ‌ನ ಸಂತೇಮರಹಳ್ಳಿಯಲ್ಲಿರುವ ರಾಜ್ಯದ ಏಕೈಕ ಅರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿ ಶಾಲೆಯಲ್ಲಿ 45 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದು, ರಾಜ್ಯ, ರಾಷ್ಟ್ರಮಟ್ಟದಲ್ಲಿ 'ಅರ್ಜುನ ಶಕ್ತಿ' ಪ್ರದರ್ಶಿಸುತ್ತಿದ್ದಾರೆ. ಪರಿಶಿಷ್ಟ ಪಂಗಡದ ಮಕ್ಕಳಿಗೆ ಮಾತ್ರ ಈ ಶಾಲೆ ಸೀಮಿತವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಯ 8 ರಿಂದ ಪದವಿವರೆಗಿನ ವಿದ್ಯಾರ್ಥಿಗಳು ಸಾಂಪ್ರದಾಯಿಕ ಕಲೆಯಲ್ಲಿ ಛಾಪು ಮೂಡಿಸುತ್ತಿದ್ದಾರೆ.

ಏನಿದು ಕ್ರೀಡಾ ವಸತಿ ಶಾಲೆ, ಏನೇನಿದೆ ಸೌಕರ್ಯ:

ದೇಶದಲ್ಲಿ ಝಾರ್ಖಂಡ್ ಹೊರತು ಪಡಿಸಿದರೇ ಕರ್ನಾಟಕದಲ್ಲಿ ಮಾತ್ರ ಸರ್ಕಾರದ ಆರ್ಚರಿ ಮತ್ತು ಫೆನ್ಸಿಂಗ್ ವಸತಿ ಶಾಲೆಯಿದ್ದು, 8ನೇ ತರಗತಿಯಿಂದ ಪದವಿವರೆಗಿನ 'ಪರಿಶಿಷ್ಟ ಪಂಗಡದ' ವಿದ್ಯಾರ್ಥಿಗಳು ಮಾತ್ರ ಇಲ್ಲಿಗೆ ದಾಖಲಾಗಬಹುದಾಗಿದೆ.

2016-17ನೇ ಸಾಲಿನಲ್ಲಿ 5ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ಕ್ರೀಡಾಂಗಣ, ಹಾಸ್ಟೆಲ್ ಸೌಲಭ್ಯ, ಲಕ್ಷಾಂತರ ಮೌಲ್ಯದ ಕ್ರೀಡಾ ಸಾಮಾಗ್ರಿಗಳನ್ನು ಸರ್ಕಾರ ಒದಗಿಸಿದೆ‌. ನುರಿತ ತರಬೇತುದಾರರಿಂದ ಬಿಲ್ವಿದ್ಯೆ ಮತ್ತು ಕತ್ತಿವರಸೆಯನ್ನು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ಹೇಳಿಕೊಡಲಿದ್ದು, ಈಗಾಗಲೇ ಹತ್ತಾರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಅರ್ಚರಿಯಲ್ಲಿ ಮಿಂಚಿದ್ದಾರೆ.

ಇಲ್ಲಿನ ವಿದ್ಯಾರ್ಥಿಗಳಿಗೆ ನಿತ್ಯ ಮೊಟ್ಟೆ, ಡ್ರೈ ಪ್ರೂಟ್ಸ್, ಹಣ್ಣಿನ ಜ್ಯೂಸ್, ಹಾಲು ನೀಡಲಿದ್ದು ವಾರಕ್ಕೆ 5 ದಿನ ಮಾಂಸಹಾರ ನೀಡಲಾಗುತ್ತದೆ. ಬೆಳಗ್ಗೆ 5 ರಿಂದ 7.30 ಸಂಜೆ 5 ರಿಂದ 8 ರವರೆಗೆ ತರಬೇತಿ ಪಡೆಯುತ್ತಾರೆ. ಇದರೊಟ್ಟಿಗೆ, ನಿತ್ಯ ತಮ್ಮ ಶಿಕ್ಷಣ, ಪರೀಕ್ಷಾ ಓದನ್ನು ಮಾಡಲಿದ್ದಾರೆ.

ರಾತ್ರಿ ಊಟದ ಬಳಿಕ ಬಿಲ್ವಿದ್ಯೆತರಬೇತಿ ನಡೆಯುತ್ತಿದೆ. ಆರ್ಚರಿಗೆ ರಘು ಹಾಗೂ ಫೆನ್ಸಿಂಗ್​​ಗೆ ಲೋಹಿತ್ ಮತ್ತು ಕಾರ್ತಿಕ್ ಎಂಬ ತರಬೇತುದಾರರಿದ್ದು, ಕಠಿಣ ಅಭ್ಯಾಸ ಮಾಡಿಸುತ್ತಿದ್ದಾರೆ.

ಈ ವರ್ಷದ ಪದಕ ಬೇಟೆ ಹೀಗಿದೆ:

  1. ಆರ್.ಜಿ‌.ಎಫ್.(Rural game federation of India) ನಡೆಸಿದ ದಕ್ಷಿಣ ವಲಯದ ಆರ್ಚರಿ ಸ್ಪರ್ಧೆಯಲ್ಲಿ ಎರಡು ಚಿನ್ನ, ವಿವಿ ಮಟ್ಟದ ಅಂತರ ಕಾಲೇಜು ಸ್ಪರ್ಧೆಯಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಕಂಚು ಗೆದ್ದಿದ್ದು ರಾಷ್ಟ್ರ ಮಟ್ಟದಲ್ಲಿ ಆಡಲು 16 ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
  2. ಫೆನ್ಸಿಂಗ್​​ನ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 14 ಪದಕಗಳನ್ನು ಗೆದ್ದಿದ್ದು, ಡಿ.27 ರಂದು ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಐವರು ಆಯ್ಕೆಯಾಗಿದ್ದಾರೆ.

ಪುರಾಣಗಳಲ್ಲಿ ಹಾಗೂ ಭಾರತದ ರಾಜರ ಇತಿಹಾಸದಲ್ಲಿ ತನ್ನದೇ ಗೌರವ, ಘನತೆ ಹೊಂದಿರುವ ಬಿಲ್ವಿದ್ಯೆ ಮತ್ತು ಕತ್ತಿವರಸೆಯಲ್ಲಿ ಈ ಆಧುನಿಕ ಅರ್ಜುನರು ಮಿಂಚುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಉತ್ಸುಕರಾಗಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.