ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ದೇಗುಲದಲ್ಲಿ ಮೈಸೂರು ರಾಜವಂಶಸ್ಥರ ಫೋಟೋ ತೆರವುಗೊಳಿಸಿರುವ ಆರೋಪ ಕೇಳಿ ಬಂದಿದೆ.
ಬಿಳಿಗಿರಿರಂಗನ ಬೆಟ್ಟ ದೇಗುಲದ ಸಂಪ್ರೋಕ್ಷಣೆ ಬಳಿ ಹಾಕಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಫೋಟೋಗಳನ್ನು ದೇವಾಲಯ ಆಡಳಿತ ಮಂಡಳಿ ತೆರವುಗೊಳಿಸಿದೆ. ಫೋಟೋ ತೆಗೆದು ಹಾಕಿ ಅವಮಾನ ಎಸಗಿದ್ದಾರೆಂದು ಕೆಲ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಅಪಮಾನದ ಆಕ್ಷೇಪ ತಳ್ಳಿ ಹಾಕಿರುವ ದೇವಾಲಯ ಆಡಳಿತ ಮಂಡಳಿ, ಕಂಬದಲ್ಲಿ ಹಾಕಲಾಗಿದ್ದ ಒಡೆಯರ್ ಫೋಟೋಗಳನ್ನು ಗೋಡೆಗೆ ಹಾಕಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರಂತೆ ಫೋಟೋ ತೆಗೆದಿಡಲಾಗಿತ್ತು. ಆದರೆ ಫೋಟೋ ತೆರವುಗೊಳಿಸಿ ಅಪಮಾನ ಮಾಡಲಾಗಿದೆಯೆಂದು ಕೆಲವರು ಅವಾಂತರ ಮಾಡಿದ್ದಾರೆ ಎಂದಿದೆ.
ಇದನ್ನೂ ಓದಿ: ಡಿಕೆಶಿ-ಎಂಬಿಪಿ ನಡುವೆ ಕೂಡು ಒಕ್ಕಲಿಗರನ್ನು ಮುಂದಿಟ್ಟು ಶುರುವಾಯ್ತು ಶೀತಲ ಸಮರ?