ಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿ ಧಾಮದ ಬಳಿಕ ಕಾವೇರಿ ವನ್ಯಜೀವಿ ಧಾಮದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಲ್ಲೂ ಸಹ ನೂರಾರು ಎಕರೆ ಕಾಡು ಬೆಂಕಿಗಾಹುತಿಯಾಗಿದೆ.
ಕೌದಳ್ಳಿ ವಲಯ, ಹಾಗೂ ಗೋಪಿನಾಥಂ ಯರಕೆಹಳ್ಳಂ ವಲಯಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿನ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಬೆಂಕಿ ಹತೋಟಿಗೆ ಬಂದ ಬೆನ್ನಲ್ಲೇ ಕಾವೇರಿ ವನ್ಯಜೀವಿ ಧಾಮ ನೆಟ್‍ಬಂಡೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯುತ್ತಿದೆ.
ಮತ್ತೊಂದೆಡೆ ಗೋಫಿನಾಥಂ, ಯರಕೆಹಳ್ಳಂ ಅರಣ್ಯ ಪ್ರದೇಶದಲ್ಲೂ ಸಹಾ ಕಾಡ್ಗಿಚ್ಚು ವ್ಯಾಪಿಸುತ್ತಿದೆ. ಕಿಡಿಗೇಡಿಗಳಿಟ್ಟ ಬೆಂಕಿಗೆ ಬಂಡೀಪುರ, ಮಲೆ ಮಹದೇಶ್ವರ ಬಳಿಕ ಕಾವೇರಿ ವನ್ಯಧಾಮದಲ್ಲಿನ ಅತಿ ವಿರಳ ಜೀವಿಗಳು, ಬೆಲೆ ಬಾಳುವ ಮರ ಬೆಂಕಿಗಾಹುತಿಯಾಗಿವೆ ಎನ್ನಲಾಗುತ್ತಿದೆ.