ETV Bharat / state

ಅಪ್ರಾಪ್ತೆ ಪುಸಲಾಯಿಸಿ ಕರೆದೊಯ್ದಿದ್ದ ವ್ಯಕ್ತಿಯ ಬಂಧನ - ವ್ಯಕ್ತಿಯ ಬಂಧನ

ಮನೆಯಲ್ಲಿ ತಂದೆ- ತಾಯಿ ಇಲ್ಲದ ವೇಳೆ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತೆರಳಿದ ಅಪ್ರಾಪ್ತೆ ಮನೆಗೆ ಹಿಂತಿರುಗದೆ ಕಾಣಿಯಾಗಿದ್ದಳು..

kollegal
ಪ್ರಸಾದ್ ಬಂಧಿತ ಆರೋಪಿ
author img

By

Published : Jul 3, 2021, 9:32 PM IST

ಕೊಳ್ಳೇಗಾಲ : ಅಪ್ರಾಪ್ತ ಬಾಲಕಿಯೋರ್ವಳನ್ನು ಪುಸಲಾಯಿಸಿ ಕರೆದೊಯ್ದಿದ್ದ ವ್ಯಕ್ತಿಯನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದು, ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ಕೊತ್ತನೂರು ಗ್ರಾಮದ ಅಪ್ರಾಪ್ತೆ ಪತ್ತೆಯಾದವಳು. ಕೆಂಪನಪಾಳ್ಯ ಗ್ರಾಮದ ಪ್ರಸಾದ್ (31) ಬಂಧಿತ ಆರೋಪಿ. ಮನೆಯಲ್ಲಿ ತಂದೆ- ತಾಯಿ ಇಲ್ಲದ ವೇಳೆ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತೆರಳಿದ ಅಪ್ರಾಪ್ತೆ ಮನೆಗೆ ಹಿಂತಿರುಗದೆ ಕಾಣಿಯಾಗಿದ್ದಳು. ಈ ಸಂಬಂಧ ಜೂನ್ 30ರಂದು ಆಕೆಯ ತಂದೆ ನಾಗರಾಜು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ತಕ್ಷಣ ತನಿಖೆ ಕೈಗೊಂಡ ಸಬ್ ಇನ್ಸ್​​ಪೆಕ್ಟರ್ ವಿ ಸಿ ಅಶೋಕ್ ನೇತೃತ್ವದ ತಂಡ ಬಾಲಕಿಯ ಪತ್ತೆಗೆ ಮುಂದಾಗಿದ್ದರು. ಜುಲೈ 2ರಂದು ಬೆಂಗಳೂರಿನಲ್ಲಿ ಪ್ರಸಾದ್ ಎಂಬಾತನ ಜೊತೆ ನಾಪತ್ತೆಯಾಗಿದ್ದ ಬಾಲಕಿ ಪತ್ತೆಯಾಗಿದ್ದಾಳೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.