ಚಾಮರಾಜನಗರ: ಜಿಲ್ಲೆಯ ಆರಾಧ್ಯದೈವ ಚಾಮರಾಜೇಶ್ವರ ರಥ ಕಾಮಗಾರಿ ಆರಂಭವಾಗದ ಹಿನ್ನೆಲೆಯಲ್ಲಿ ಕರ್ನಾಟಕ ಸೇನಾ ಪಡೆಯ ಸದಸ್ಯರು ಜಿಲ್ಲಾಡಳಿತ ಭವನ ಆವರಣದಲ್ಲಿ ತಮಟೆ ಬಾರಿಸಿ ಪ್ರತಿಭಟನೆ ನಡೆಸಿದರು.
ರಥ ಸುಟ್ಟು ಹೋಗಿ ಮೂರು ವರ್ಷಗಳಾಗುತ್ತಾ ಬಂದಿದೆ. ಕಳೆದ 3 ತಿಂಗಳ ಹಿಂದೆ ಕಾಟಾಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿ ಹೋದರು. ಆದರೆ, ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಣ ಬಿಡುಗಡೆಯಾಗಿ 2 ವರ್ಷ, ಗುದ್ದಲಿ ಪೂಜೆ ಮಾಡಿ 3 ತಿಂಗಳಾಗಿದೆ. ಆದರೂ ಕಾಮಗಾರಿ ಆರಂಭವಾಗಿಲ್ಲ. ಇದು ಹೀಗೆ ಮುಂದುವರಿದರೆ ಇನ್ನೂ 3 ವರ್ಷವಾದರೂ ರಥೋತ್ಸವ ನಡೆಯುದಿಲ್ಲ ಎಂದು ಕನ್ನಡ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅಸಮಾಧಾನ ಹೊರಹಾಕಿದರು.