ಚಾಮರಾಜನಗರ: ಎರಡು ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಗ್ರಾಮದ ಮಹೇಂದ್ರ ಎಂಬ ಯುವಕ ದಾನಿಗಳು ಜೊತೆಗೆ ನಟ ದರ್ಶನ್ ಅವರ ನೆರವನ್ನು ಎದುರು ನೋಡುತ್ತಿದ್ದಾನೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಮಹೇಂದ್ರ ಹಲವಾರು ಮಾತ್ರೆಗಳು, ಖಾಸಗಿ ಕಂಪನಿಯ ವಿವಿಧ ಪೌಡರ್ಗಳನ್ನು ಸೇವಿಸಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ವಾರಕ್ಕೆ ಎರಡು ದಿನ ಡಯಾಲಿಸಿಸ್ ಮಾಡಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. ತಂದೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಮಹೇಂದ್ರನಿಗೆ ಮೂರು ವರ್ಷದ ಮಗುವಿದ್ದು, ಗಂಡನ ಆರೋಗ್ಯಕ್ಕಾಗಿ ಪತ್ನಿ ಕೆಲಸ ಹುಡುಕುತ್ತಿದ್ದಾರೆ.
ಚಿಕ್ಕಂದಿನಿಂದಲೂ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಚಿತ್ರ ನೋಡಿ ಬೆಳೆದ ಮಹೇಂದ್ರ ತಾನು ಆರಾಧಿಸುವ ಚಿತ್ರನಟರೇ ನೆರವು ನೀಡಬೇಕೆಂದು ಹಂಬಲಿಸುತ್ತಿದ್ದಾರೆ. ಮಹೇಂದ್ರನ ತಂದೆ ದರ್ಶನ್ ತೋಟಕ್ಕೆ ತೆರಳಿ ಸಹಾಯಹಕ್ಕೆ ಮೊರೆಯಿಡುವ ಬಗ್ಗೆ ಚಿಂತನೆ ಮಾಡಿದ್ದರು. ಅದು ಸಾಧ್ಯವಾಗದೇ ಸಾಲ ಮಾಡಿ ಆದ್ರೂ ಮಗನನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದಾರೆ.
ಕಿಡ್ನಿ ಕಸಿಯೇ ಅವಶ್ಯ...
27 ವರ್ಷದ ಮಹೇಂದ್ರಗೆ ಎರಡು ಕಿಡ್ನಿಗಳು ವೈಫಲ್ಯಗೊಂಡಿರುವುದರಿಂದ ಕಿಡ್ನಿ ಕಸಿ ಮಾಡಿಸುವುದು ಅನಿವಾರ್ಯವಾಗಿದೆ. ಪತ್ನಿ ಹಾಗೂ ತಂದೆ ತಮ್ಮ ಒಂದು ಮೂತ್ರಪಿಂಡವನ್ನು ಕೊಡಲು ಮುಂದೆ ಬಂದರಾದರೂ ಸರಿ ಹೊಂದುವುದಿಲ್ಲ ಎಂದು ತಜ್ಞ ವೈದ್ಯರು ತಿಳಿಸಿರುವುದರಿಂದ ಈ ಕುಟುಂಬಕ್ಕೆ ಈಗ ದಿಕ್ಕೇ ತೋಚದಂತಾಗಿದೆ.
ಹಲವಾರು ಜನರಿಗೆ ಸಹಾಯಹಸ್ತ ಚಾಚುತ್ತಿರುವ ನಟ ದರ್ಶನ್ ಹಾಗೂ ಡಿಬಾಸ್ ಅಭಿಮಾನಿಗಳು ತಮಗೆ ನೆರವು ನೀಡಬೇಕೆಂದು ಮಹೇಂದ್ರ ಮತ್ತು ಅವರ ತಂದೆ ನಾಗರಾಜು 'ಈಟಿವಿ ಭಾರತ' ಮೂಲಕ ಮನವಿ ಮಾಡಿಕೊಂಡಿದ್ದಾರೆ.
ದಾನಿಗಳ ಗಮನಕ್ಕೆ...
ಆಸಕ್ತ ದಾನಿಗಳು ಮಹೇಂದ್ರ ಅವರ ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ನೀಡಬಹುದಾಗಿದೆ.
ಖಾತೆಯ ಹೆಸರು: ಮಹೇಂದ್ರ ಎನ್.
ಖಾತೆಯ ಸಂಖ್ಯೆ: 915010013171874
ಖಾತೆಯ IFSC: UTIB0000880
ಬ್ಯಾಂಕ್ ಹೆಸರು: ಆ್ಯಕ್ಸಿಸ್ ಬ್ಯಾಂಕ್, ಚಾಮರಾಜನಗರ ಶಾಖೆ
ಮಹೇಂದ್ರ ಮೊಬೈಲ್ ಸಂಖ್ಯೆ: 7483931352