ಚಾಮರಾಜನಗರ: ಸಂಡೇ ಲಾಕ್ಡೌನ್ ವೇಳೆ ಹೊರಗಡೆ ಹರಟೆ ಹೊಡೆಯುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡು ಹೆದರಿ ಓಡುವಾಗ ಮುಗ್ಗರಿಸಿ ಬಿದ್ದು ಮೃತಪಟ್ಟಿರುವ ಘಟನೆ ಕುದೇರು ಠಾಣಾ ವ್ಯಾಪ್ತಿಯ ಎಲಕ್ಕೂರು ಗ್ರಾಮದಲ್ಲಿ ನಡೆದಿದೆ.
ಶಂಕರ್(24) ಮೃತ ದುರ್ದೈವಿ. ಭಾನುವಾರ ಸಂಜೆ ಗ್ರಾಮದ ಅಂಗನವಾಡಿ ಹತ್ತಿರ ನಾಲ್ಕಾರು ಸ್ನೇಹಿತರು ಮಾತನಾಡುತ್ತ ಕುಳಿತ್ತಿದ್ದ ವೇಳೆ ಲಾಕ್ಡೌನ್ ಬೀಟ್ ನಡೆಸುತ್ತಿದ್ದ ಕುದೇರು ಪೊಲೀಸರ ಜೀಪ್ ಕಂಡು ಓಡಿದ ವೇಳೆ, ಮುಗ್ಗರಿಸಿ ಬಿದ್ದು ಶಂಕರ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ನಡುವೆ, ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಜಿಲ್ಲಾಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಘಟನೆ ಕುರಿತು, ಯಾವುದೇ ದೂರಾಗಲಿ- ಪ್ರಕರಣವಾಗಲಿ ದಾಖಲಾಗಿಲ್ಲ.