ETV Bharat / state

ಜಪ್ತಿ ಮಾಡಿದ ಬೈಕ್​ನೊಂದಿಗೆ ಎಸ್ಕೇಪ್​ ಆಗಲು ಯತ್ನಿಸಿದ ಸವಾರ.. ಪೊಲೀಸರು ಮಾಡಿದ್ದೇನು ನೋಡಿ - ಪೊಲೀಸರಿಂದ ಬೈಕ್ ಸೀಜ್

ಚಾಮರಾಜನಗರದಲ್ಲಿ ಸೀಜ್ ಮಾಡಿದ್ದ ಬೈಕ್​ನೊಂದಿಗೆ ಪರಾರಿಯಾಗಲು ಯತ್ನಿಸಿದ ಸವಾರ ಕೂಡ ಪೊಲೀಸರ ವಶವಾಗಿದ್ದಾನೆ.

A Rider tried to escape with seized bike
ಎಸ್ಕೇಪ್ ಆಗುತ್ತಿದ್ದವನನ್ನು ಹಿಡಿದ ಪೊಲೀಸರು
author img

By

Published : May 10, 2021, 12:02 PM IST

ಚಾಮರಾಜನಗರ : ನಗರದಲ್ಲಿ ಜಪ್ತಿ ಮಾಡಿದ್ದ ಬೈಕ್​​ ಅನ್ನು ಪೊಲೀಸರ ಕಣ್ತಪ್ಪಿಸಿ ತೆಗೆದುಕೊಂಡು ಹೋಗಲು ಯತ್ನಿಸಿದ ಸವಾರನನ್ನು ಚೇಸ್ ಮಾಡಿ ಮತ್ತೆ ಬೈಕ್​ ವಶಪಡಿಸಿಕೊಳ್ಳಲಾಗಿದೆ.

ನಗರದಲ್ಲಿ ಲಾಕ್​ ಡೌನ್​ ಅವಧಿಯಲ್ಲಿ ಅನಗತ್ಯವಾಗಿ ರಸ್ತೆಗಿಳಿದ ಬೈಕ್​ ಅನ್ನು ಪೊಲೀಸರು ಸೀಜ್ ಮಾಡಿ ರಸ್ತೆ ಬದಿ ನಿಲ್ಲಿಸಿದ್ದರು. ಈ ವೇಳೆ ಚಾಲಾಕಿ ಸವಾರ ಪೊಲೀಸರ ಕಣ್ತಪ್ಪಿಸಿ ತನ್ನ ಬೈಕ್ ಜೊತೆ ಎಸ್ಕೇಪ್ ಆಗಲು ನೋಡಿದ್ದಾನೆ. ಆಗ ಓಡಿ ಹೋಗಿ ಆತನನ್ನು ಹಿಡಿದ ಪೊಲೀಸ್ ಸಿಬ್ಬಂದಿ ಬೈಕ್ ಜೊತೆ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಎಸ್ಕೇಪ್ ಆಗುತ್ತಿದ್ದವನನ್ನು ಹಿಡಿದ ಪೊಲೀಸರು

ಓದಿ : ರಸ್ತೆಗಿಳಿದ್ರೆ ಬೈಕ್ ಸೀಜ್: ಸೈಕಲ್ ಮೊರೆ ಹೋದ ಧಾರವಾಡ ಮಂದಿ

ಬೈಕ್ ಜೊತೆ ಎಸ್ಕೇಪ್ ಆಗಲು ಯತ್ನಿಸಿದ್ದಲ್ಲದೆ ಸವಾರ ಪೊಲೀಸರೊಂದಿಗೆ ವಾಗ್ವಾದಕ್ಕೆ ಮುಂದಾಗಿದ್ದ, ಈ ವೇಳೆ ಆತನಿಗೆ ಗದರಿದ ಪೊಲೀಸರು ವಶಕ್ಕೆ ಪಡೆದು, ಆತನ ಬೈಕ್​ನಲ್ಲೇ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.