ETV Bharat / state

ಹನಿಟ್ರ್ಯಾಪ್​ಗೆ​ ಬಿದ್ದ ಅರ್ಚಕನಿಗೆ ಪಂಗನಾಮ, ಆರೋಪಿಗಳು ಅಂದರ್!

ಸದ್ಯ ಹನಿಟ್ರ್ಯಾಪ್​ಗೆ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತಹದೇ ಒಂದು ಪ್ರಕರಣ ಈಗ ಚಾಮರಾಜನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹನಿಟ್ರ್ಯಾಪ್ ಹೆಸರಿನಲ್ಲಿ ಅರ್ಚಕನಿಂದ ಆರೋಪಿಗಳು ಲಕ್ಷ - ಲಕ್ಷ ಪೀಕಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

author img

By

Published : Nov 13, 2019, 9:42 PM IST

Updated : Nov 13, 2019, 11:46 PM IST

ಹನಿಟ್ರ್ಯಾಪ್​ಗೆ​ ಬಿದ್ದ ಅರ್ಚಕನಿಗೆ ಪಂಗನಾಮ

ಚಾಮರಾಜನಗರ: ಹನಿಟ್ರ್ಯಾಪ್​ ಬಲೆಗೆ ಬಿದ್ದು ಅರ್ಚಕನೊಬ್ಬ ಬರೋಬ್ಬರಿ 18 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

ಅರ್ಚಕ ಹಣ ಕಳೆದುಕೊಂಡಿದ್ದು, ಈ ಸಂಬಂಧ ಬೆಂಗಳೂರಿನ ಹೆಸರಘಟ್ಟ ನಿವಾಸಿಗಳಾದ ಸರೋಜಮ್ಮ,ಬಸವರಾಜು ,ನಾಗರತ್ನಮ್ಮ ಎಂಬುವವರನ್ನು ಬಂಧಿಸಲಾಗಿದೆ. ಈ ಮೂವರು ಆರೋಪಿಗಳು ಆಗಾಗ್ಗೆ ಅರ್ಚಕನ ಬಳಿ ಪೂಜೆ ಮಾಡಿಸುತ್ತಿದ್ದರು. ಜೊತೆಗೆ ಬೆಂಗಳೂರಿಗೆ ಪೂಜೆಗೆ ತೆರಳಿದ್ದ ವೇಳೆ ಬಲೆಗೆ ಬಿದ್ದ ಈತನಿಂದ ಲಕ್ಷ ಲಕ್ಷ ಪೀಕಿದ್ದಾರೆ.

ನೀನು ಲೈಂಗಿಕ ಕಿರುಕುಳ ನೀಡಿದ್ದೀಯಾ, ಅಶ್ಲೀಲವಾಗಿ ಮಾತನಾಡಿದ್ದೀಯಾ ನಾವು ನಿನ್ನ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆವೊಡ್ಡಿ ಕಳೆದ 20 ಲಕ್ಷ ರೂ. ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೇ ಸುಮ್ಮನಾಗದೇ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರಿಂದ ನ.8 ರಂದು ಅರ್ಚಕ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರ್ಚಕನ ಮೂಲಕ ಆರೋಪಿಗಳನ್ನು ಮದ್ದೂರಿನಲ್ಲಿ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Intro:ಹನಿಟ್ರಾಪ್ ಗೊಳಗಾದ ಕೊಳ್ಳೇಗಾಲದ ಅರ್ಚಕ... 20 ಲಕ್ಷ ಪೀಕಿದ ಬಳಿಕ 50 ಲಕ್ಷಕ್ಕೆ ಬೇಡಿಕೆ ಇಟ್ಟು ಅಂದರ್!

ಚಾಮರಾಜನಗರ: ಹನಿಟ್ರಾಪಿಗೆ ಬಲೆಗೆ ಬಿದ್ದು ಅರ್ಚಕರೊಬ್ಬರು ಬರೋಬ್ಬರಿ 18 ಲಕ್ಷ ರೂ. ಕಳೆದುಕೊಂಡ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

Body:ಪ್ರಸಿದ್ಧ ಮಾಂತ್ರಿಕರು, ಆಂಜನೇಯಸ್ವಾಮಿ ಅರ್ಚಕರಾದ ಟಿ.ವಿ.ಎಸ್.ರಾಘವನ್ ಅವರು ಹಣ ಕಳೆದುಕೊಂಡಿದ್ದು ಬೆಂಗಳೂರಿನ ಹೆಸರಘಟ್ಟ ನಿವಾಸಿಗಳಾದ ಸರೋಜಮ್ಮ, ಬಸವರಾಜು , ನಾಗರತ್ನಮ್ಮ ಎಂಬವರನ್ನು ಬಂಧಿಸಲಾಗಿದೆ.

ಅರ್ಚಕ ಶ್ರೀನಿವಾಸ್ ರಾಘವನ್ ಎಂಬುವರ ಬಳಿ ಮೂವರು ಆರೋಪಿಗಳು ಆಗಾಗ್ಗೆ ಬಂದು ಪೂಜೆ ಮಾಡಿಸುತ್ತಿದ್ದರು, ಜೊತೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದ್ದು ಬೆಂಗಳೂರಿಗೆ ಪೂಜೆಗೆ ತೆರಳಿದ್ದ ವೇಳೆ ಮಾಯದ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ, ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆವೊಡ್ಡಿ ಕಳೆದ 6 ಸುಮಾರು 20 ಲಕ್ಷ ರೂ. ವಸೂಲಿ ಮಾಡಿದ್ದರೆ ಎಂದು ಮೂಲಗಳು ತಿಳಿಸಿವೆ.

ಅಷ್ಟಕ್ಕೇ ಸುಮ್ಮನಾಗದೇ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರಿಂದ ನ.8 ರಂದು ಅರ್ಚಕರು ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.

Conclusion:ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರ್ಚಕರ ಮೂಲಕ ಆರೋಪಿಗಳನ್ನು ಮದ್ದೂರಿಗೆ ಕರೆಯಿಸಿ ಬಂಧಿಸಿ, ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಇಂದು ಒಪ್ಪಿಸಿದ್ದಾರೆ.
Last Updated : Nov 13, 2019, 11:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.