ಚಾಮರಾಜನಗರ: ದೇಗುಲ ಉದ್ಘಾಟನೆಗೆ ಬಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾಲಿಗೆ ಅವರ ಆಪ್ತ ಸಹಾಯಕ ಶೂ ತೊಡಿಸಿದ್ದಾರೆ.
ಚಾಮರಾಜನಗರ ತಾಲೂಕಿನ ನಲ್ಲೂರು ಮೋಳೆಯಲ್ಲಿ ಮಲ್ಲಿಗಮ್ಮ ದೇಗುಲ ಉದ್ಘಾಟನೆ ಹಾಗೂ ರಾಜಗೋಪುರ ಉದ್ಘಾಟನೆಗೆ ಸಿದ್ದರಾಮಯ್ಯ ಬಂದಿದ್ದರು.
ದೇಗುಲಕ್ಕೆ ತೆರಳುವಾಗ ಸಿದ್ದರಾಮಯ್ಯರ ಕಾಲಿನಿಂದ ಶೂ ಬಿಚ್ಚಿದ ಆಪ್ತ ಸಹಾಯಕ, ಕಾರ್ಯಕ್ರಮ ಉದ್ಘಾಟಿಸಿ ಹೊರಬಂದ ಬಳಿಕ ಕಾಲಿಗೆ ಶೂ ತೊಡಿಸಿದರು.